ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ | ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು
ಮಂಗಳೂರು: ಮಂಗಳೂರಿನ ಖ್ಯಾತ ವಕೀಲ, ಲೋಕಾಯುಕ್ತ ವಿಭಾಗದ ವಿಶೇಷ ಸರ್ಕಾರಿ ಅಭಿಯೋಜಕನ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ಸಂತ್ರಸ್ತೆ ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆ.ಎಸ್.ಎನ್.ರಾಜೇಶ್ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ವಕೀಲನಾಗಿದ್ದು, ಈತನ ಕರಂಗಲ್ಬಾಡಿ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಆಗಸ್ಟ್ 8ರಂದು 20 ವರ್ಷ ವಯಸ್ಸಿನ ಕಾನೂನು ವಿದ್ಯಾರ್ಥಿನಿ ರಾಜೇಶ್ ಅವರ ಕಚೇರಿಯಲ್ಲಿ ತರಬೇತಿಗಾಗಿ ಸೇರ್ಪಡೆಗೊಂಡಿದ್ದರು. ಈ ನಡುವೆ ರಾಜೇಶ್ ಯುವತಿಯನ್ನು ಪುಸಲಾಯಿಸಿ, ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಕಳೆದ ಸೆ.25ರಂದು ತನ್ನ ಚೇಂಬರ್ ಗೆ ವಿದ್ಯಾರ್ಥಿನಿಯನ್ನು ಕರೆದು ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಂಗಳೂರಿನಲ್ಲಿ ಒಳ್ಳೆಯ ಹೆಸರು ಪಡೆದಿದ್ದ ರಾಜೇಶ್, ಈ ಘಟನೆಯ ಬಳಿಕ ವಿದ್ಯಾರ್ಥಿನಿಗೆ ಕರೆ ಮಾಡಿ, ತನ್ನ ಕಚೇರಿಗೆ ಬರುವಂತೆ ಮತ್ತು ಮುಂದೆ ಎಂದಿಗೂ ಆ ರೀತಿಯಾಗಿ ನಡೆದುಕೊಳ್ಳುವುದಿಲ್ಲ, ಈ ವಿಚಾರ ಇಲ್ಲಿಗೇ ಬಿಟ್ಟು ಬಿಡು ಎಂದು ಗೋಗರೆಯುತ್ತಿರುವ ಆಡಿಯೋವೊಂದು ವೈರಲ್ ಆಗಿದೆ.
ಇನ್ನೂ ಘಟನೆ ಸಂಬಂಧ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ರಾಜೇಶ್, ಈ ಪ್ರಕರಣ ನನ್ನ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ. ನನ್ನ ಹೆಸರಿನ ಫೇಕ್ ಆಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ಹಣ ಸುಲಿಗೆಗೆ ಬೇಡಿಕೆ ಇಟ್ಟಿರುವುದಾಗಿ ಸೆ.27 ರಂದು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈಗ ವಿದ್ಯಾರ್ಥಿನಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ನಿನ್ನೆ ದೂರು ನೀಡಿರುವುದಾಗಿ ತಿಳಿದುಬಂದಿದೆ. ಆದರೆ ವಿದ್ಯಾರ್ಥಿನಿ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ಇನ್ನೂ ವಕೀಲನಿಂದ ಲೈಂಗಿಕ ಕಿರುಕುಳ ಕೇಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ರಾಜೇಶ್ ನೀಡಿದ್ದ ದೂರನ್ನು ನಾವು ದಾಖಲಿಸಿಕೊಂಡಿದ್ದೇವೆ. ಫೇಕ್ ಆಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರು ಎಂದಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? | ರಮೇಶ್ ಜಾರಕಿಹೊಳಿ
ಪಠ್ಯಪುಸ್ತಕದಲ್ಲಿ ಪ್ರವಾದಿಯ ಅವಹೇಳನ: ಕ್ಯಾಂಪಸ್ ಫ್ರಂಟ್ ನಿಂದ ದೂರು
ದೇವರ ದರ್ಶನಕ್ಕೆ ಹೋದ ಸ್ವಾಮೀಜಿಯನ್ನು ದರದರನೇ ಎಳೆದೊಯ್ದ ದೇವಸ್ಥಾನದ ಸಿಬ್ಬಂದಿ: ವಿಡಿಯೋ ವೈರಲ್
ಆಟವಾಡುತ್ತಾ ಹೋದ ಬಾಲಕ ಮರಳಿ ಬರಲಿಲ್ಲ: ಬಾಲಕನನ್ನು ಬಲಿಪಡೆದ ನೀರಿನ ತೊಟ್ಟಿ
ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ