ಸಂಘ ಸಂಸ್ಕಾರ ಪಡೆದು ಅಶ್ಲೀಲ ದೃಶ್ಯ, ಸಿಡಿ ಸುಳಿಯಲ್ಲಿ ಸಿಲುಕಿದವರು ಯಾರು?… ಸದಾನಂದ ಪರಿವಾರ | ಜೆಡಿಎಸ್ ಕಿಡಿ
ಬೆಂಗಳೂರು: ಸಂಘ ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು? ಸಿಡಿ ಸುಳಿಯಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷದವರು? ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ? ಅನಾಚಾರವೆಂಬುದು ಬಿಜೆಪಿ ಕಾಯಕ, ಅಭ್ಯಾಸ, ನಿತ್ಯದ ದಿನಚರಿ ಮತ್ತು ಚಾಳಿ ಎಂದು ಜೆಡಿಎಸ್ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಹೇಳುವುದು ಆಚಾರ, ಮಾಡುವುದು ಅನಾಚಾರ. ಜನರಿಗೆ ಗೊತ್ತಿದೆ ನಿಮ್ಮ ಸದಾನಂದ ಪರಿವಾರ. ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಠಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು? ಅವರ ಹಿಂದೆಯೇ ಹಿಂಡು ಹಿಂಡಾಗಿ ಜೈಲು ಕಂಬಿ ಎಣಿಸಿದ ಸಚಿವ ಶಿಖಾಮಣಿಗಳು ಯಾವ ಪಕ್ಷದವರು? ಎಂದು ಪ್ರಶ್ನಿಸಿದೆ.
ಸಮಾಜದ ಉದ್ಧಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ಸ್ವಯಂ ಘೋಷಿತ ಸೇವಾ ಸಂಸ್ಥೆ ಅರ್ ಎಸ್ ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸತ್ಯವನ್ನು ದಾಟಿಸುವ ಹುನ್ನಾರದೊಂದಿಗೆ ಬಿಜೆಪಿಯು ದಾಸರ ಪದಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಕುಮಾರಸ್ವಾಮಿ ಅವರು ಆರ್ ಎಸ್ ಎಸ್ ತರಬೇತಿ ನೀಡಿದ ಅಧಿಕಾರಿಗಳ ಬಗ್ಗೆ ಹೇಳಿದ್ದರೆ, ನೀವು ಯು.ಪಿ.ಎಸ್.ಸಿ ಗೆ ಸಮೀಕರಣ ಮಾಡಿ ಕೆ.ಪಿ.ಎಸ್.ಸಿ ಬಗ್ಗೆ ಎಗ್ಗಿಲ್ಲದೆ ಸುಳ್ಳು ಹೇಳುತ್ತಿದ್ದೀರಿ. ಸಾಂವಿಧಾನಿಕ ಸಂಸ್ಥೆಗಳನ್ನು ಗುಲಾಮರಂತೆ ಮಾಡಿಕೊಂಡಿರುವ ನಿಮಗೆ ಕೆ.ಪಿ.ಎಸ್.ಸಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಕುಮಾರಸ್ವಾಮಿ ಅವರೆಂದೂ ಕೆ.ಪಿ.ಎಸ್.ಸಿ.ಯನ್ನು ದುರುಪಯೋಗ ಮಾಡಿಕೊಂಡಿಲ್ಲ. 2011ರಲ್ಲಿ ಪಾಸಾಗಿ ಅನ್ಯಾಯಕ್ಕೆ ಒಳಗಾದ ಹಳ್ಳಿ ರೈತರ ಮಕ್ಕಳ ಪರ ಹೋರಾಟ ನಡೆಸಿದ್ದಾರೆ. ನಿಮ್ಮ ಹಾಗೆ ಗರ್ಭಗುಡಿ ಸಂಸ್ಕೃತಿ ಅವರದಲ್ಲ. ಮನೆ ಬಾಗಿಲಿಗೆ ಬಂದು ಸಹಾಯ ಕೇಳುವ ಯಾರನ್ನೂ ಸೊಕ್ಕಿನಿಂದ ಆಚೆಗಟ್ಟಿದವರಲ್ಲ. ನಿಮಗೆ ಆ ಮಾನವೀಯತೆ ಹೇಗೆ ಗೊತ್ತಾಗಬೇಕು? ಎಂದು ಜೆಡಿಎಸ್ ಪ್ರಶ್ನೆಗಳ ಸುರಿಮಳೆ ಸುರಿಸಿದೆ.
ಕೆ.ಪಿ.ಎಸ್.ಸಿ ಯನ್ನು ಹಾಳು ಮಾಡಿದ್ದು ಯಾರು? ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು. ಬಿಡಿಎಯಲ್ಲಿ ತಿಂದು ತೇಗಿದವರನ್ನು ಕೆ.ಪಿ.ಎಸ್.ಸಿ ಗೆ ತಂದು ಕೂರಿಸಿದ್ದು ಯಾರೆಂಬುದು ಗೊತ್ತಿಲ್ಲವೆ? ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವ ಹಾಗಿದೆ ಬಿಜೆಪಿ ವರಸೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ನಿಷ್ಪಕ್ಷಪಾತ ನಿಲುವಿನ ನಿಮ್ಮ ಮಹಾನಾಯಕ ಮಾಧ್ಯಮವು 1 ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಯಾವುದೇ ಪಕ್ಷಗಳ, ರಾಜಕಾರಣಿಗಳ ಅಡಿಯಾಳಾಗದೇ ತನ್ನದೇ ಮಾರ್ಗದಲ್ಲಿ ಸಾಗುತ್ತಿರುವ ಮಹಾನಾಯಕ ಮಾಧ್ಯಮಕ್ಕೆ ಓದುಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಾನತೆಯನ್ನು ಸಾಧಿಸುವ ಧ್ಯೇಯದೊಂದಿಗೆ ಸಾಗುತ್ತಿರುವ ಮಾಧ್ಯಮವು ಈ ಒಂದು ವರ್ಷದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ಎದೆಗುಂದದೇ ಮಾಧ್ಯಮ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ. ಮಾಧ್ಯಮ ಒಂದು ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಮಾಧ್ಯಮದ ಮೇಲೆ ಓದುಗರ ನಿರೀಕ್ಷೆ ಕೂಡ ಹೆಚ್ಚಿದೆ. ಹಾಗಾಗಿ ಮುಂದಿನ ಹಂತದಲ್ಲಿ ಮಾಧ್ಯಮವನ್ನು ಇನ್ನಷ್ಟು ದೊಡ್ಡಮಟ್ಟಕ್ಕೆ ತಲುಪಿಸಲು ಓದುಗರು ಹಾಗೂ ಸಮಾನ ಮನಸ್ಕರ ನೆರವು ಕೂಡ ಅಗತ್ಯವಾಗಿದೆ. ಮಹಾನಾಯಕ ಮಾಧ್ಯಮಕ್ಕೆ ನಿಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನೆರವು ನೀಡುವಂತೆ ಮನವಿ ಮಾಡುತ್ತಿದ್ದೇವೆ. ನೆರವು ನೀಡಲು ಬಯಸುವವರು 9686872149ಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಮಾಡಬಹುದಾಗಿದೆ.