ವೈಯಕ್ತಿಕ ಟೀಕೆಗೆ ತಿರುಗಿದ ರಾಜಕೀಯ ಕೆಸರಾಟ: ಕುಮಾರಸ್ವಾಮಿಯ ಎರಡನೇ ಮದುವೆ ಬಗ್ಗೆ ಬಿಜೆಪಿ ಟಾಂಗ್
ಬೆಂಗಳೂರು: ಉಪ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಗೆ ಸೈದ್ಧಾಂತಿಕ ಪ್ರಶ್ನೆಗಳನ್ನು ಹಾಕಿರುವ ಬೆನ್ನಲ್ಲೇ ಇದೀಗ ಇದು ವೈಯಕ್ತಿವಾದ ಆರೋಪದ ಸ್ವರೂಪವನ್ನು ಪಡೆದುಕೊಂಡಿದ್ದಾರೆ.
ಆರೆಸ್ಸೆಸ್ ನ್ನು ಟೀಕಿಸಿದ್ದ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಸರಣಿ ಟ್ವೀಟ್ ಗಳ ಮೂಲಕ ಕುಮಾರಸ್ವಾಮಿ ಅವರಿಗೆ ಚುಚ್ಚಿದೆ. ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು ಎಂದು ಹೇಳಿದೆ.
ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ ), ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ, ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಅವರೇ, ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ? ಎಂದು ಕುಮಾರಸ್ವಾಮಿ ಅವರ ವೈಯಕ್ತಿಕ ಬದುಕನ್ನು ಕೆದಕಿದೆ.
ಬೈಗಮಿ ಎಂದರೆ, ಒಬ್ಬಳು ಪತ್ನಿ ಇರುವಾಗಲೇ ಮತ್ತೊಂದು ಮದುವೆಯಾಗುವುದು ಅಥವಾ ಮೊದಲ ಪತ್ನಿಗೆ ವಿಚ್ಛೇದನ ನೀಡದೆಯೇ ಮತ್ತೊಂದು ಮದುವೆಯಾಗುವುದು. ಕುಮಾರಸ್ವಾಮಿ ಅವರು ರಾಧಿಕಾ ಕುಮಾರಸ್ವಾಮಿ ಅವರನ್ನು ವಿವಾಹವಾಗಿರುವ ವಿಚಾರವಾಗಿ ಬಿಜೆಪಿ ಟಾಂಗ್ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯ ಮದುವೆ: ಈ ಚಿತ್ರದ ಅಸಲಿ ಕಥೆ ಏನು?
ಸಿದ್ದರಾಮಯ್ಯ ‘ಸಾಬ್ರಕಾ ಸಾತ್, ಸಾಬ್ರಕಾ ವಿಕಾಸ್’ ಅನ್ನುತ್ತಿದ್ದಾರೆ | ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ಮೀನು ಸಾಗಾಟದ ಟೆಂಪೋ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಪಠ್ಯಪುಸ್ತಕದಲ್ಲಿ ಪ್ರವಾದಿಯ ಅವಹೇಳನ: ಕ್ಯಾಂಪಸ್ ಫ್ರಂಟ್ ನಿಂದ ದೂರು
ಆಟವಾಡುತ್ತಾ ಹೋದ ಬಾಲಕ ಮರಳಿ ಬರಲಿಲ್ಲ: ಬಾಲಕನನ್ನು ಬಲಿಪಡೆದ ನೀರಿನ ತೊಟ್ಟಿ