ನಿರ್ಲಜ್ಜ, ನೀಚ ರಾಜಕಾರಣಿಗಳ ಬದಲು ಹಿಂದೂ ಸಂಘಟನೆಗಳಿಗೆ ಬಲ ತುಂಬಿ: ಬಿಜೆಪಿ ವಿರುದ್ಧ ಮುತಾಲಿಕ್ ಪರೋಕ್ಷ  ಕಿಡಿ - Mahanayaka
2:08 PM Thursday 12 - December 2024

ನಿರ್ಲಜ್ಜ, ನೀಚ ರಾಜಕಾರಣಿಗಳ ಬದಲು ಹಿಂದೂ ಸಂಘಟನೆಗಳಿಗೆ ಬಲ ತುಂಬಿ: ಬಿಜೆಪಿ ವಿರುದ್ಧ ಮುತಾಲಿಕ್ ಪರೋಕ್ಷ  ಕಿಡಿ

pramod muthalik
20/10/2021

ಶಿವಮೊಗ್ಗ:  ಬಿಜೆಪಿಯಲ್ಲಿ ನಿರಂತರವಾಗಿ ಟಿಕೆಟ್ ವಂಚಿತರಾಗುತ್ತಿರುವ ಶ್ರೀರಾಮಸೇನೆಯ(Shri Ram Sene) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ ಎನ್ನಲಾಗುತ್ತಿದ್ದು, ರಾಜಕಾರಣಿಗಳಷ್ಟು ನಿರ್ಲಜ್ಜ ನೀಚರು ಯಾರೂ ಇಲ್ಲ. ಹಾಗಾಗಿ ರಾಜಕಾರಣಿಗಳ ಬದಲಾಗಿ, ಹಿಂದೂ ಸಂಘಟನೆಗಳಿಗೆ ಬಲತುಂಬಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ನಮಗೆ ಬಲತುಂಬಿ, ನಿಮ್ಮ ದೇವಸ್ಥಾನ ಉಳಿಸುತ್ತೇವೆ. ನಿಮ್ಮ ಅಕ್ಕ—ತಂಗಿಯರನ್ನು ಉಳಿಸುತ್ತೇವೆ. ನಿಮ್ಮ ಹಸುವಿನ ಒಂದೇ ಒಂದು ಹನಿ ರಕ್ತ ನೆಲಕ್ಕೆ ಬೀಳಲು ಬಿಡುವುದಿಲ್ಲ. ರಾಜಕಾರಣಿಗಳಿಗೆ ಬಲತುಂಬಬೇಡಿ ಅವರಷ್ಟು ನಿರ್ಲಜ್ಜ ನೀಚರು ಯಾರೂ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ(BJP) ವಿರುದ್ಧ ಕಿಡಿಕಾಡಿದ್ದಾರೆ.

ರಾಜಕಾರಣಿಗಳು ಯಾವುದೇ ಪಕ್ಷದವರಾಗಲಿ ಅವರಿಗೆ ಧಿಕ್ಕಾರವಿರಲಿ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಹಿಂದುತ್ವದ ಮುಖವಾಡ ಹಾಕಿಕೊಂಡು ದೇಶದಲ್ಲಿ ಆಗುತ್ತಿರುವ ಅನಾಹುತಕ್ಕೆ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಕೆಡವಿತ್ತು ಈ ವಿಚಾರಕ್ಕೂ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮುತಾಲಿಕ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶ್ರೀರಾಮನ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಬಿಜೆಪಿ ಪರವಾಗಿ ನಿರಂತರ ಕೆಲಸಗಳನ್ನು ಮಾಡಿದರೂ ಬಿಜೆಪಿ ಪಕ್ಷವು ಸಂಘಟನೆಯ ಹೊರಗಿನವರಿಗೆ ಅವಕಾಶಗಳನ್ನು ನೀಡುತ್ತಿರುವುದು ಮುತಾಲಿಕ್ ಅವರ ಕೆಂಗಣ್ಣಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೆ ಬಿಜೆಪಿ ಟಿಕೆಟ್ ವಂಚಿತರಾಗಿದ್ದಕ್ಕೆ ಮುತಾಲಿಕ್ ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೇವಸ್ಥಾನ ಉರುಳಿಸಿದ ವಿಚಾರ ಮೊದಲಾದವುಗಳನ್ನು ಎತ್ತಿಕೊಂಡು ಪಕ್ಷದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರೆ ಎನ್ನುವ ಅನುಮಾನಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

“ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್” ಎಂಬ ನಳಿನ್ ಹೇಳಿಕೆ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ

ಐವನ್ ಡಿಸೋಜ ಮನೆಗೆ ನುಗ್ಗಲು ಬಜರಂಗದಳದ ಕಾರ್ಯಕರ್ತರಿಂದ ಯತ್ನ: 8 ಮಂದಿ ಅರೆಸ್ಟ್

65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!

ಸಿದ್ದರಾಮಯ್ಯ ‘ಸಾಬ್ರಕಾ ಸಾತ್, ಸಾಬ್ರಕಾ ವಿಕಾಸ್’ ಅನ್ನುತ್ತಿದ್ದಾರೆ | ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ನಿಮ್ಮ ಮೆಚ್ಚಿನ ಮಹಾನಾಯಕ ಮಾಧ್ಯಮಕ್ಕೆ 1 ವರ್ಷದ ಸಂಭ್ರಮ

ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ

ಇತ್ತೀಚಿನ ಸುದ್ದಿ