ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ - Mahanayaka
11:50 AM Thursday 12 - December 2024

ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ

puttur dalith protest
22/10/2021

ಪುತ್ತೂರು: ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಮಗು ಜನನಕ್ಕೆ ಕಾರಣಕರ್ತನಾದ ಆರೆಸ್ಸೆಸ್ ಮುಖಂಡನನ್ನು ಬಂಧಿಸ ಬೇಕು ಹಾಗೂ  ಆರೋಪಿಗೆ ರಕ್ಷಣೆ ನೀಡಿದ ಸಂಪ್ಯ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.

ಈ ವೇಳೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಹಣದ ಆಮಿಷಕ್ಕೆ ಒಳಗಾಗಿ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಸಂತ್ರಸ್ಥೆಯ ಸಹೋದರನನ್ನು ಜೈಲಿಗೆ ಹಾಕಿದ್ದಾರೆ. ಆರೋಪಿಯ ರಕ್ಷಣೆಗೆ ಬೆಂಬಲ ನೀಡುವ ಪೊಲೀಸರನ್ನು ಅಮಾನತು ಮಾಡುವುದಾಗಿ ಭರವಸೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ನಮಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮನ್ವಯ ಸಮಿತಿ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಮಾತನಾಡಿ, ತೋಟದ ಕೆಲಸಕ್ಕೆ ಬಂದ ಬಡ ದಲಿತ ಬಾಲಕಿಯನ್ನು ನಾರಾಯಣ ರೈ ನಿರಂತರ ಅತ್ಯಾಚಾರ ನಡೆಸಿದ್ದು, ಆಕೆ 4 ತಿಂಗಳ ಗರ್ಭಿಣಿ ಎಂದು ತಿಳಿದ ಬಳಿಕ ಮಾತ್ರೆ ತಂದುಕೊಟ್ಟಿದ್ದಾನೆ. ಅಲ್ಲದೆ ಆಕೆಗೆ ಮೊಬೈಲ್ ನೀಡಿ, ಅದಕ್ಕೆ ಕರೆಮಾಡಿ ಹಿಂಸೆ ನೀಡಿದ್ದಾನೆ. ಗರ್ಭಿಣಿ ಎಂದು ತಿಳಿದರೂ ಪ್ರತಿದಿನ ಅತ್ಯಾಚಾರ ಎಸಗಿದ್ದಾನೆ.  ಕೇಸಿನಲ್ಲಿ ತಿಳಿಸಲಾದ ಲೊಕೇಶನ್ ಬದಲಾಗಿದೆ. ಪ್ರಮೋದ್ ಎಂಬಾತನನ್ನು ಕೇಸಿನಲ್ಲಿ ತೋರಿಸಿ ಠಾಣೆಗೆ ಆತನ್ನು ಕರೆಯಿಸಿ ವಿಚಾರಿಸಿ ಕಳುಹಿಸಿದ್ದಾರೆ. ಊಟ ನೀಡುವ ನೆಪದಲ್ಲಿ ಸಂತ್ರಸ್ಥೆಯ ಅಣ್ಣನನ್ನು ಠಾಣೆಗೆ ಕರೆಸಿಕೊಂಡು ಬಂಧಿಸಲಾಗಿದೆ ಎಂದು ಆರೋಪಿಸಿದರಲ್ಲದೇ, ಇಂತಹ ನೀಚ ಕೃತ್ಯ ಎಸಗುವ ಆರೆಸ್ಸೆಸ್ ನವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕೂಡ ಮಾತನಾಡುತ್ತಿಲ್ಲ:

ಮೊಗೇರರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ವಿಶ್ವನಾಥ್ ಅವರು ಮಾತನಾಡಿ, ಘಟನೆ ನಡೆದು ಒಂದೂವರೆ ತಿಂಗಳಾದರೂ ಇನ್ನೂ ಪ್ರಕರಣ ದಾಖಲಿಸಲಾಗಿಲ್ಲ. ಈ ತನಕ ಆರೋಪಿಯ ವಿಚಾರಣೆಯನ್ನೂ ನಡೆಸಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು, ಇಲ್ಲಿನ ಶಾಸಕರು ಘಟನೆಯ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ಅನುಮಾನಗಳಿಗೆ ಎಡೆಮಾಡಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡಾ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತರ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ನಾಯಕಿ ಈಶ್ವರಿ ಪದ್ಮುಂಜ ಮಾತನಾಡಿ, ಆರೆಸ್ಸೆಸ್ ಹಾಗೂ ಬಿಜೆಪಿ ಆಡಳಿತವಿರುವಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಮುಕ್ಕಿ ತಿನ್ನುತ್ತಿದ್ದಾರೆ. ದಲಿತರನ್ನು ಭೋಗದ ವಸ್ತುವಾಗಿ ನೋಡುತ್ತಿದ್ದಾರೆ. ಆರೆಸ್ಸೆಸ್ ಬೆಳೆಯಲು ದಲಿತರೇ ಕಾರಣ. ತಾಯಿಗೆ ಗೌರವ ನೀಡುವ ಬಿಜೆಪಿ, ಆರೆಸ್ಸೆಸ್ ನವರ ಹಿಂದುತ್ವ  ಈಗ ಎಲ್ಲಿ ಹೋಗಿದೆ. ಹಣ ಪಡೆದು ಸುಳ್ಳು ಕೇಸು ದಾಖಲಿಸುವ ಮೂಲಕ ಸಂತ್ರಸ್ತೆಯ ಅಣ್ಣನನ್ನೇ ಪ್ರಕರಣದಲ್ಲಿ ಬಂಧಿಸುವ ಪೊಲೀಸರಿಗೆ ಅಕ್ಕ, ತಂಗಿಯರಿಲ್ಲವೇ ಎಂದ ಪ್ರಶ್ನಿಸಿದ ಅವರು, ಮಗುವಿನ ಡಿಎನ್‍ ಎ ಪರೀಕ್ಷೆ ನಡೆಸುವ ಮೂಲಕ ನಿಜವಾದ ಆರೋಪಿಯನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? | ಕೇಂದ್ರ ಸರ್ಕಾರದ ಕಿವಿ ಹಿಂಡಿದ ಸಿದ್ದರಾಮಯ್ಯ

ಮಂಗಳೂರಿನ ಸಂಘದ ಪ್ರಚಾರಕರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಓಡಿ ಹೋಗಿದ್ದವರು ಯಾರು? | ಕುಮಾರಸ್ವಾಮಿ ಪ್ರಶ್ನೆ

ಬಂಧಿಸಲು ಹೋದ ಪೊಲೀಸರಿಗೆ ತಲ್ವಾರ್ ತೋರಿಸಿ ಪರಾರಿಯಾದ ರೌಡಿಶೀಟರ್!

ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರದ್ದೇ ದೊಡ್ಡಪಾಲು | ಪ್ರಿಯಾಂಕ್ ಖರ್ಗೆ

ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಪ್ರದರ್ಶಿಸಿದ ಸಂಘ ಪರಿವಾರದ ವಿರುದ್ಧ ಪ್ರಕರಣ ದಾಖಲಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? | ರಮೇಶ್ ಜಾರಕಿಹೊಳಿ

ಇತ್ತೀಚಿನ ಸುದ್ದಿ