“ರತ್ನನ್ ಪ್ರಪಂಚ" ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು - Mahanayaka
2:05 PM Thursday 12 - December 2024

“ರತ್ನನ್ ಪ್ರಪಂಚ” ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು

rathnan prapancha
22/10/2021

“ನೆನ್ನೆ ತಾನೇ Amazon prime ನಲ್ಲಿ ಬಿಡುಗಡೆಯಾದ “ರತ್ನನ್ ಪ್ರಪಂಚ”  ಸಿನಿಮಾವನ್ನು ಕಂಡು ಹಾಸನದ ಯುವಕ ಸಚಿನ್ ಸರಗೂರು ಅಚ್ಚರಿ ವ್ಯಕ್ತಪಡಿಸಿದ್ದು, ಇದೊಂದು ಅತ್ಯದ್ಭುತವಾದ ಸಿನಿಮಾವಾಗಿದೆ ಎಂದು ಅಭಿಪ್ರಾಯ ವ್ಯಕಪಡಿಸಿದ್ದಾರೆ

“ರತ್ನನ್ ಪ್ರಪಂಚ” ಬರೀ ರತ್ನಾಕರನಿಗೆ ಸೀಮಿತವಲ್ಲ. ನಮ್ಮೆಲ್ಲರ ಪ್ರಪಂಚ, ನಾವು ಒಮ್ಮೆ ನೆನಪಿಸಿಕೊಂಡು ತಿರುಗಿ ನೋಡಬೇಕಾದ ಪ್ರಪಂಚ. ಇದನ್ನು ವರ್ಣಿಸಲು ನಮ್ಮ ಬಳಿ ಪದಗಳು ಇಲ್ಲದೇ ಇದ್ದರು ಪರವಾಗಿಲ್ಲ, ಅಮ್ಮ ಅನ್ನೋ ಪದದ ಅರ್ಥ ಗೊತ್ತಿದ್ದರೆ ಸಾಕು. ನಮ್ಮ ಡಾಲಿ ಯಾವುದೇ ಪಾತ್ರವನ್ನು ಅಪ್ಪಿ ತಬ್ಬಿಕೊಳ್ಳೋ ಪರಿಯೇ ಅದ್ಭುತ. “ದಿಯಾ” ಚಿತ್ರದ ನಂತರ ನನ್ನ ಮತ್ತದೆ ಭಾವುಕತೆಯ ಸಾಗರದಲ್ಲಿ ಮಿಂದೇಳೋ ಹಾಗ್ ಮಾಡಿದ್ ಚಿತ್ರ “ರತ್ನನ್ ಪ್ರಪಂಚ”(Rathnan Prapancha) ಎಂದು ರತ್ನನ್ ಪ್ರಪಂಚವನ್ನು ಹಾಡಿ ಹೊಗಳಿದ್ದಾರೆ.

ಚಿತ್ರದಲ್ಲಿ ಬರೋ ಒಂಬತ್ತು ಪಾತ್ರಗಳು ನಮ್ಮಲ್ಲಿರೋ ನವರಸಗಳನ್ನ ಬಡಿದೆಬ್ಬಿಸ್ತಾವೆ. ಇಲ್ಲಿ ಕುತೂಹಲಗಳ ಆಗರ ಇಲ್ಲ, ಆದ್ರೆ ಸದಭಿರುಚಿಯ ಪಾತ್ರಗಳಿಗೇನು ಕೊರತೆ  ಇಲ್ಲ. ಇಲ್ಲಿ ನಿರ್ದೇಶಕರು ಹೇಳೋದಕ್ಕೆ ಹೊರಟಿರೋ ವಿಚಾರ ಸರಳವಾಗಿದೆ, ಸ್ಪಷ್ಟವಾಗಿದೆ ಎಂದು ಸಚಿನ್ ಹೇಳಿದ್ದಾರೆ.

ಹೆರುವ ಕರುಳಿಗಿರೋ ಶ್ರೇಷ್ಠತೆ, ನೈಜತೆಯ ಪ್ರೀತಿ ವಾತ್ಸಲ್ಯವನ್ನ ಬಸೆದು ಪೊರೆಯೋ ಮಲತಾಯಿಯ ಹೆಸರಿಗೂ ಆ ಶ್ರೇಷ್ಠತೆ ಅಂಟಿದೆ. ನಟರಾಕ್ಷಸ ಡಾಲಿ Dhananjaya  ಹಾಗೂ ಉಮಾಶ್ರೀ ಅವರ ಅಭಿನಯ ಕಣ್ಣಂಚಿನಲ್ಲಿ ನೀರು ತರಿಸುತ್ತೆ ಅಂದ್ರೆ ಅವರ ಅಭಿನಯದ ಉತ್ಕೃಷ್ಠತೆ ಎಷ್ಟಿದೆ ಅನ್ನೋದನ್ನ ನೀವೇ ಯೋಚಿಸಿ.. ಎಂದಿರುವ ಸಚಿನ್, ಇಂಥ ಒಂದು ಒಳ್ಳೆಯ ಸಿನಿಮಾವನ್ನ ನೀಡಿರೋ KRG ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಜೊತೆಗೆ ಈ ಸದಾಭಿರುಚಿಯ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಇಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಎಂದು ಅವರು ಸಿನಿ ಪ್ರಿಯರಿಗೆ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ