ನಟ ವಿವೇಕ್ ಸಾವಿಗೆ ಕೊವಿಡ್ ಲಸಿಕೆ ಕಾರಣವೇ? ಸರ್ಕಾರ ನೀಡಿದ ಅಂತಿಮ ವರದಿಯೇನು?
ಚೆನ್ನೈ: ತಮಿಳು ಹಾಸ್ಯ ನಟ ವಿವೇಕ್ ಕೊವಿಡ್ ವಾಕ್ಸಿನ್ ಪಡೆದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರು ಕೊವಿಡ್ ಲಸಿಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದರು. ಆದರೆ, ಅವರು ಕೊವಿಡ್ ಲಸಿಕೆಯಿಂದ ಸಾವನ್ನಪ್ಪಿಲ್ಲ ಎಂದು ಸರ್ಕಾರ ಅಧಿಕೃತ ವರದಿ ನೀಡಿದೆ.
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ, ಪರಿಸರ ಪ್ರೇಮಿಯಾಗಿದ್ದ ನಟ ವಿವೇಕ್ (Actor Vivek) ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದರು. 59 ವರ್ಷ ವಯಸ್ಸಿನ ವಿವೇಕ್ ಏಪ್ರಿಲ್ 15ರಂದು ಕೊವಿಡ್ ಲಸಿಕೆ ಪಡೆದುಕೊಂಡಿದ್ದರು. ಮರುದಿನ ಏಪ್ರಿಲ್ 16ರಂದು ಅವರಿಗೆ ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ನಿಧನರಾಗಿದ್ದರು.
ಕೊವಿಡ್ ಲಸಿಕೆಯಿಂದಲೇ ವಿವೇಕ್ ಅವರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು. ಆದರೆ, ಇದನ್ನು ಅಂದು ಕೂಡ ಸರ್ಕಾರ ತಳ್ಳಿ ಹಾಕಿತ್ತು. ಇದೀಗ ಅಂತಿಮವಾಗಿ ನೀಡಿರುವ ವರದಿಯಲ್ಲಿ, ವಿವೇಕ್ ಅವರ ಸಾವಿಗೆ ಕೊವಿಡ್ ಲಸಿಕೆ ಕಾರಣವಲ್ಲ ಎಂದು ವರದಿ ನೀಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಸಿದ್ದರಾಮಯ್ಯನವರನ್ನು ಶೀಘ್ರವೇ ಆಫ್ಘಾನಿಸ್ತಾನಕ್ಕೆ ಕಳುಹಿಸಬೇಕು | ವಿ.ಶ್ರೀನಿವಾಸ್ ಪ್ರಸಾದ್
ಚುನಾವಣೆಗೋಸ್ಕರ ಆರೆಸ್ಸೆಸ್, ವಿಎಚ್ ಪಿ ಬಗ್ಗೆ ಮಾತನಾಡುವುದು ಸರಿಯಲ್ಲ: ವಿಶ್ವಪ್ರಸನ್ನ ಸ್ವಾಮೀಜಿ
ತುಮಕೂರು: ಬಜರಂಗದಳದ ಬಂದ್ ಗೆ ತಡೆಯೊಡ್ಡಿದ ಬಿಜೆಪಿ | ಅಷ್ಟಕ್ಕೂ ನಡೆದ ಯಡವಟ್ಟೇನು?
ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ
ಲೈಂಗಿಕ ದೌರ್ಜನ್ಯ: ಆರೋಪಿ ವಕೀಲ ರಾಜೇಶ್ ಭಟ್ ನನ್ನು ರಕ್ಷಿಸಲು ನಡೆದಿತ್ತು ಭಾರೀ ಷಡ್ಯಂತ್ರ!