ಜನ್ಮ ದಿನದಂದೇ ಡ್ರಗ್ಸ್ ಗ್ಯಾಂಗ್ ಗಳ ಗುಂಡಿಗೆ ಬಲಿಯಾದ ಭಾರತೀಯ ಮೂಲದ ಮಹಿಳೆ! - Mahanayaka
1:12 PM Thursday 12 - December 2024

ಜನ್ಮ ದಿನದಂದೇ ಡ್ರಗ್ಸ್ ಗ್ಯಾಂಗ್ ಗಳ ಗುಂಡಿಗೆ ಬಲಿಯಾದ ಭಾರತೀಯ ಮೂಲದ ಮಹಿಳೆ!

anjali
24/10/2021

ಮೆಕ್ಸಿಕೋ: ಹುಟ್ಟು ಹಬ್ಬ ಆಚರಿಸಲು ಭಾರತೀಯ ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ಯುವತಿಯೊಬ್ಬರು ಮೆಕ್ಸಿಕೊಗೆ ತೆರಳಿದ್ದರು. ಈ ವೇಳೆ ಎರಡು ಡ್ರಗ್ಸ್ ಗ್ಯಾಂಗ್ ಗಳ ನಡುವೆ ನಡೆದ ಗುಂಡಿನ ದಾಳಿ ಪ್ರತಿ ದಾಳಿ ನಡೆದಿದ್ದು, ಪರಿಣಾಮವಾಗಿ ಯುವತಿಗೆ ಗುಂಡು ತಗಲಿ ಆಕೆ ಮೃತಪಟ್ಟಿದ್ದಾಳೆ.

ಅಂಜಲಿ ರೈಯಾಟ್ ಮೃತ ಭಾರತೀಯ ಮಹಿಳೆಯಾಗಿದ್ದಾರೆ.  ಇವರ ಜೊತೆಗೆ ಜರ್ಮನಿ ಮೂಲದ ಪ್ರವಾಸಿ ಮಹಿಳೆ, ನೆದರ್ ಲ್ಯಾಂಡ್ ಮೂಲದ ಮೂವರು ಪ್ರವಾಸಿ ಮಹಿಳೆಯರಿಗೆ ಕೂಡ ಗುಂಡು ತಗಲಿದೆ. ಅವರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಾರತೀಯ ಮೂಲದ ಯುವತಿ ಅಂಜಲಿಯ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಆಕೆಯು ಹಿಮಾಚಲ ಪ್ರದೇಶ ಮೂಲದ ಟ್ರಾವೆಲ್‌ ಬ್ಲಾಗರ್‌ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ. ಅವರು ಆದರೆ ಕ್ಯಾಲಿಫೊರ್ನಿಯಾದ ಸ್ಯಾನ್‌ ಜೋಸ್‌ ನಲ್ಲಿ ಅವರು ವಾಸವಿದ್ದರು.

ತಲುಮ್‌ ನಗರದ ಲಾ ಮಾಲ್‌ ಕ್ಯುರಿರಾ ರೆಸ್ಟೊರೆಂಟ್‌ ನ ಟೆರ್ರೇಸ್‌ನಲ್ಲಿ. ಬುಧವಾರ ರಾತ್ರಿ 10:30ರ ಸುಮಾರಿಗೆ ಎರಡು ಕ್ರಿಮಿನಲ್‌ ಗ್ಯಾಂಗ್‌ಗಳು ಮುಖಾಮುಖಿಯಾಗಿದ್ದು, ಈ ವೇಳೆ ಶೂಟೌಟ್ ನಡೆದಿದೆ. ಈ ಸಂದರ್ಭ ಡ್ರಗ್ಸ್ ಗ್ಯಾಂಗ್ ನವರು ಇದ್ದ ಟೇಬಲ್ ಮುಂದೆ ಈ ಮಹಿಳೆಯರು ಇದ್ದಿದುದರಿಂದ ಮಹಿಳೆಯರಿಗೆ ಗುಂಡು ತಗಲಿದ್ದು, ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ನಟ ವಿವೇಕ್ ಸಾವಿಗೆ ಕೊವಿಡ್ ಲಸಿಕೆ ಕಾರಣವೇ? ಸರ್ಕಾರ ನೀಡಿದ ಅಂತಿಮ ವರದಿಯೇನು?

ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ

ದೆವ್ವದಂತೆ ವೇಷ ಧರಿಸಿ ಹೆದರಿಸಲು ಹೋದ ಯುವತಿಯ ದುರಂತ ಅಂತ್ಯ!

“ರತ್ನನ್ ಪ್ರಪಂಚ” ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು

ಲೈಂಗಿಕ ದೌರ್ಜನ್ಯ: ಆರೋಪಿ ವಕೀಲ ರಾಜೇಶ್ ಭಟ್ ನನ್ನು ರಕ್ಷಿಸಲು ನಡೆದಿತ್ತು ಭಾರೀ ಷಡ್ಯಂತ್ರ!

ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ

“ಬಾಯಿ ತೊಳೆದುಕೊಳ್ಳಿ” ಎಂದು ನಳಿನ್ ಕುಮಾರ್ ಗೆ ಫಿನಾಯಿಲ್ ಪಾರ್ಸೆಲ್!

ಕಾರಿನ ಬದಲು ಅಡುಗೆ ಪಾತ್ರೆಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದ ವಧುವರ!

ಇತ್ತೀಚಿನ ಸುದ್ದಿ