ಬೆಲೆ ಏರಿಕೆ ಬೆನ್ನಲ್ಲೇ ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಗ್ಯಾಸ್ ಸಿಲಿಂಡರ್ ಗಳು! - Mahanayaka

ಬೆಲೆ ಏರಿಕೆ ಬೆನ್ನಲ್ಲೇ ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಗ್ಯಾಸ್ ಸಿಲಿಂಡರ್ ಗಳು!

gas cylinder
24/10/2021

ಭೋಪಾಲ್:  ಬಿಜೆಪಿ ಸರ್ಕಾರ ಇರುವ ಮಧ್ಯಪ್ರದೇಶ ರಾಜ್ಯದಲ್ಲಿ ಎಲ್ ಪಿಜಿ ಸಿಲಿಂಡರ್ ಗಳು ಗುಜರಿ ಅಂಗಡಿಯಲ್ಲಿ ರಾಶಿ ರಾಶಿಯಾಗಿ ಬೀಳುತ್ತಿದ್ದು, ಗ್ಯಾಸ್ ಬೆಲೆ ಗಗನಕ್ಕೆ ಏರಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.


Provided by

ಈ ಚಿತ್ರವು ಭಿಂಡ್ ಜಿಲ್ಲೆಯ ಗುಜರಿ ಅಂಗಡಿದ್ದು ಎಂದು ಹೇಳಲಾಗಿದೆ. ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳು ರಾಶಿ ಬಿದ್ದಿರುವುದು ವಿಡಿಯೋದಲ್ಲಿ  ಕಂಡು ಬಂದಿದೆ.  ಇಲ್ಲಿ ಕಾಣುತ್ತಿರುವ ಸಿಲಿಂಡರ್ ಗಳು ನರೇಂದ್ರ ಮೋದಿ ಆಡಳಿತದಲ್ಲಿ ನಿಯಂತ್ರಣವಿಲ್ಲದ ಹಣದುಬ್ಬರವನ್ನು ಸಾರಿ ಹೇಳುತ್ತಿದೆ ಎಂದು ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ.

ಜಬಲ್ಪುರದಲ್ಲಿ ಉಜ್ವಲ ಯೋಜನೆಯನ್ನು ಎರಡನೇ ಹಂತದಲ್ಲಿ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ ಬೆನ್ನಲ್ಲೇ , ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ಯಾಸ್ ಬೆಲೆ ಏರಿಕೆಯಿಂದ ಜನರು ಮತ್ತೆ ಸೌದೆ ಒಲೆಯ ಬಗ್ಗೆ ಯೋಚಿಸುವಂತಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಜನ್ಮ ದಿನದಂದೇ ಡ್ರಗ್ಸ್ ಗ್ಯಾಂಗ್ ಗಳ ಗುಂಡಿಗೆ ಬಲಿಯಾದ ಭಾರತೀಯ ಮೂಲದ ಮಹಿಳೆ!

ನಟ ವಿವೇಕ್ ಸಾವಿಗೆ ಕೊವಿಡ್ ಲಸಿಕೆ ಕಾರಣವೇ? ಸರ್ಕಾರ ನೀಡಿದ ಅಂತಿಮ ವರದಿಯೇನು?

ಸಿದ್ದರಾಮಯ್ಯನವರನ್ನು ಶೀಘ್ರವೇ ಆಫ್ಘಾನಿಸ್ತಾನಕ್ಕೆ ಕಳುಹಿಸಬೇಕು | ವಿ.ಶ್ರೀನಿವಾಸ್ ಪ್ರಸಾದ್

ಚುನಾವಣೆಗೋಸ್ಕರ ಆರೆಸ್ಸೆಸ್, ವಿಎಚ್ ಪಿ ಬಗ್ಗೆ ಮಾತನಾಡುವುದು ಸರಿಯಲ್ಲ: ವಿಶ್ವಪ್ರಸನ್ನ ಸ್ವಾಮೀಜಿ

ತುಮಕೂರು: ಬಜರಂಗದಳದ ಬಂದ್ ಗೆ ತಡೆಯೊಡ್ಡಿದ ಬಿಜೆಪಿ | ಅಷ್ಟಕ್ಕೂ ನಡೆದ ಯಡವಟ್ಟೇನು?

“ರತ್ನನ್ ಪ್ರಪಂಚ” ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು

ಇತ್ತೀಚಿನ ಸುದ್ದಿ