ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ | 14 ಮಂದಿ ಅರೆಸ್ಟ್
ಬೆಳಗಾವಿ: ರಾಜ್ಯಾದ್ಯಂತ 3,533 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಈ ನಡುವೆ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಬಂಧಿಸಲಾಗಿದೆ.
ಬ್ಲೂಟೂತ್ ಸಾಧನ ಬಳಸಿಕೊಂಡು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಮತ್ತು ಇದಕ್ಕಾಗಿ ಸಹಾಯ ಮಾಡಿದ 12 ಮಂದಿ ಸೇರಿದಂತೆ 14 ಮಂದಿಯನ್ನು ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಗೋಕಾಕ್ ತಾಲೂಕಿನ ಮಸಗುಪ್ಪಿ ಲಕ್ಷ್ಮಣ, ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಸರಸ್ವತಿ ಪೂಜಾರಿ ಬ್ಲೂಟೂತ್ ಸಾಧನದ ಮೂಲಕ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ರಾಮತೀರ್ಥ ಪಟ್ಟಣದ ಕೊಠಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಕಲು ಮಾಡಲು ಸಹಾಯ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
3 ಕೋಟಿ ತೆರಿಗೆ ಪಾವತಿಸಿ ಎಂದು ಬಡ ಆಟೋ ಚಾಲಕನಿಗೆ ಐಟಿ ಇಲಾಖೆ ನೋಟಿಸ್!
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ
ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ
ಅಕ್ಟೋಬರ್ 25ರಂದು ಮಂಗಳೂರಿನಲ್ಲಿ ‘ಸಂವಿಧಾನ ದೀಕ್ಷೆ’ ಕಾರ್ಯಕ್ರಮ
ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವುದೇ ಕುಮಾರಸ್ವಾಮಿಯ ಗುರಿ: ಜಮೀರ್ ಆರೋಪ