ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್ - Mahanayaka
4:23 PM Wednesday 5 - February 2025

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

s t somashekhar
25/10/2021

ಬೆಂಗಳೂರು:  ರೈತರಿಗೆ ಶೇ.125ರಷ್ಟು ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದು,  ಈ ಸಂಬಂಧ ಡಿಸಿಸಿ ಬ್ಯಾಂಕುಗಳ ಸಭೆಯನ್ನು ಕರೆಯಲಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿ ಶೇ.115 ರಷ್ಟು ಗುರಿ ಮೀರಿದ ಸಾಧನೆ ಮಾಡಿದ್ದೆವು. ಈ ವರ್ಷ ಇನ್ನಷ್ಟು ಹೆಚ್ಚಳ ಮಾಡಲಾಗಿದೆ. ಸಾಧನೆ ಮೀರಿ ಶೇಕಡ 125 ರಷ್ಟು ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸೋಮಶೇಖರ್ ವಿವರಿಸಿದ್ದಾರೆ.

12,35,033 ರೈತರಿಗೆ 9,136.89 ಕೋಟಿ ಸಾಲ ನೀಡಲಾಗಿದ್ದು, ಶೇ.72.96 ರಷ್ಟು ಗುರಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಣೆಯಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ | 14 ಮಂದಿ ಅರೆಸ್ಟ್

3 ಕೋಟಿ ತೆರಿಗೆ ಪಾವತಿಸಿ ಎಂದು ಬಡ ಆಟೋ ಚಾಲಕನಿಗೆ ಐಟಿ ಇಲಾಖೆ ನೋಟಿಸ್!

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ

ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ

ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವುದೇ ಕುಮಾರಸ್ವಾಮಿಯ ಗುರಿ: ಜಮೀರ್ ಆರೋಪ

ಫೋಟೋ ಹಾಕಿಲ್ಲ ಅಂತ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೇ ಬಂದಿಲ್ಲ, ಇನ್ನು ಸಿಎಂ ಸ್ಥಾನ ಬಿಡ್ತಾರಾ? | ಕುಮಾರಸ್ವಾಮಿ ಪ್ರಶ್ನೆ

ಜನ್ಮ ದಿನದಂದೇ ಡ್ರಗ್ಸ್ ಗ್ಯಾಂಗ್ ಗಳ ಗುಂಡಿಗೆ ಬಲಿಯಾದ ಭಾರತೀಯ ಮೂಲದ ಮಹಿಳೆ!

ಇತ್ತೀಚಿನ ಸುದ್ದಿ