ಬ್ರಾಹ್ಮಣರಿಗೆ ಉನ್ನತ ಹುದ್ದೆ, ದಲಿತ, ಬಿಲ್ಲವ, ಬಂಟರಿಗೆ ತ್ರಿಶೂಲ ವಿತರಣೆ | ಭಾಸ್ಕರ್ ಪ್ರಸಾದ್ ಕಿಡಿ
ಮಂಗಳೂರು: ಸಂಘಪರಿವಾರ ಹಂಚಿದ ತ್ರಿಶೂಲದ ಷಡ್ಯಂತ್ರಕ್ಕೆ ಬಲಿಯಾಗಿ ಹಿಂದುಳಿದ ವರ್ಗ, ದಲಿತ, ಬಿಲ್ಲವ, ಬಂಟ ಸಮುದಾಯದ ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ(SDPI) ರಾಜ್ಯ ಸಮಿತಿ ಸದಸ್ಯ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಎಸ್.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ “ ಸಂವಿಧಾನ ದೀಕ್ಷೆ”(Samvidhan Deeksha) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣರು ಉನ್ನತ ಹುದ್ದೆಯನ್ನು ಅಲಂಕರಿಸಿ ಅತ್ಯುತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ. ಹಿಂದುಳಿದ ವರ್ಗ, ದಲಿತ, ಬಿಲ್ಲವ, ಬಂಟ ಸಮುದಾಯದ ಕೈಗೆ ತ್ರಿಶೂಲ ನೀಡಿ ಅವರ ಜೀವನವನ್ನು ಹಾಳು ಮಾಡಲಾಗುತ್ತಿದೆ. ಇದನ್ನು ಹಿಂದುಳಿದವರು, ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಭಾಸ್ಕರ್ ಪ್ರಸಾದ್ ಹೇಳಿದರು.
ವಿ.ಎಚ್.ಪಿ(VHP) ಮತ್ತು ಬಜರಂಗದಳ(Bajarangdal) ತ್ರಿಶೂಲ ದೀಕ್ಷೆಯ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಪುಂಡಾಟಿಕೆಗೆ ಮುಂದಾದರೆ ಸಂವಿಧಾನ ಉಳಿಸಲು ಎಸ್.ಡಿ.ಪಿ.ಐ ಗೆ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ, ಆಕ್ಷನ್ ಗೆ ರಿಯಾಕ್ಷನ್ ಎಂಬ ಹೇಳಿಕೆಯನ್ನು ವಿರೋಧಿಸಿದ ಭಾಸ್ಕರ್ ಪ್ರಸಾದ್(Bhaskarprasad), ಸಾರ್ವಜನಿಕರು ಕ್ರಿಯೆಗೆ—ಪ್ರತಿಕ್ರಿಯೆ ಎಂಬಂತೆ ಇಳಿದರೆ, ರಾಜ್ಯದ ಪರಿಸ್ಥಿತಿ ಎಲ್ಲಿಗೆ ಹೋಗಬಹುದು? ಗೌರವಾನ್ವಿತ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗ ಗೌರವಯುತವಾಗಿ, ಘನತೆಯಿಂದ ನಡೆದುಕೊಳ್ಳಬೇಕು. ಅದು ಆಗದಿದ್ದರೆ ಮುಖ್ಯಮಂತ್ರಿ(Basavaraj Bommai) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಸಂಘಟನೆ ಬೇಕಾದರೂ ಸೇರಿ ಇಂತಹ ಹೇಳಿಕೆ ನೀಡಲಿ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
74 ವರ್ಷದ ವೃದ್ಧನಿಂದ ಬಾಲಕಿಯ ಅತ್ಯಾಚಾರ: ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣು
ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ
ಮಕ್ಕಳನ್ನು ತಲೆ ಕೆಳಗಾಗಿಸಿ ನೇತು ಹಾಕಿ ಕ್ರೌರ್ಯ ಮೆರೆದ ತಂದೆ–ತಾಯಿ
ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ
ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ