ಬಿಜೆಪಿಯ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು | ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ - Mahanayaka
4:20 PM Wednesday 5 - February 2025

ಬಿಜೆಪಿಯ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು | ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

h d kumaraswamy
26/10/2021

ವಿಜಯಪುರ: 2008ರಿಂದ 2013ರ ಉಪ ಚುನಾವಣೆಗಳವರೆಗೆ ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು. ಯಡಿಯೂರಪ್ಪ ಜತೆ ಸೇರಿಕೊಂಡು ಒಳಸಂಚು ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರ ಹೆಚ್.ಡಿ.ಕುಮಾರ ಸ್ವಾಮಿ ಆರೋಪಿಸಿದ್ದಾರೆ.

ಸಿಂದಗಿಯಲ್ಲಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಸೂಟ್ ಕೇಸ್ ಪಡೆದಿದ್ದೇನೆಂದು ಆರೋಪಿಸುತ್ತಿದ್ದಾರೆ.. ಯಾರೋ ಒಬ್ಬರನ್ನು ಮುಂದೆ ಬಿಟ್ಟು ಅವರು ಹೀಗೆ ಆರೋಪಿಸುತ್ತಿದ್ದಾರೆ. ಇವರು ಒಳಸಂಚು ಮಾಡಿಕೊಂಡು ಎಷ್ಟು ಸೂಟ್ ಕೇಸ್  ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್  ಬೆಂಬಲ ನೀಡಿದೆ. ಇದ್ಯಾವ ಜಾತ್ಯತೀತತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಾರ್ಜ್, ಭೈರತಿ ಬಸವರಾಜ್ ಮಧ್ಯೆ ಗಲಾಟೆಯಾಗಿತ್ತು. ಯಾವುದೋ ಒಂದು ಖಾತೆ ವಿಚಾರವಾಗಿ ಗಲಾಟೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿಕೊಂಡರು. ಆಗ ರಮೇಶ್ ಜಾರಕಿಹೊಳಿ ಇವರ ವಿರುದ್ಧ ಸಿಡಿದೆದ್ದಿದ್ದರು. ಯಾಕೆ ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಲಂಬಾಣಿ ಸಮುದಾಯದವರು ಗುಳೆ ಹೋಗುತ್ತಿದ್ದಾರೆ. ಲಂಬಾಣಿ ಸಮುದಾಯಕ್ಕೆ ಪ್ರಾಧಿಕಾರ ಕೊಟ್ಟಿದ್ದೀನಿ ಅಂತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 19 ಜನ ಮೃತಪಟ್ಟಿದ್ದರು. ಮೃತಪಟ್ಟ 19 ಜನರ ಕುಟುಂಬಕ್ಕೆ ಏನಾದ್ರೂ ಕೊಟ್ಟಿದ್ರಾ? ಅಂತ ಪ್ರಶ್ನಿಸಿದ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಜಾತ್ಯತೀತ ನಾಯಕರಲ್ವಾ? ಮತ್ತೇಕೆ ಅವರು ಎಲ್ಲ ಸಮುದಾಯದವರ ಸಭೆ ಮಾಡ್ತಿದ್ದಾರೆ? ಪ್ರತ್ಯೇಕ ಸಭೆ ಮಾಡುವ ಅವಶ್ಯಕತೆ ಏನಿತ್ತು  ಅವರು ಪ್ರಶ್ನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಶಿಕ್ಷಣ ವ್ಯವಸ್ಥೆಗೆ ನನ್ನ ಬಲಿದಾನ ಎಂದು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

ಎಟಿಎಂನಲ್ಲಿ ಹೊಸ  ಫೀಚರ್ ಪರಿಚಯಿಸಿದ ಎಸ್ ಬಿಐ: ಇದರ ಪ್ರಯೋಜನ ಏನು ಗೊತ್ತಾ?

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ ಶೀಘ್ರವೇ 5 ಸಾವಿರ ಶಿಕ್ಷಕರ ನೇಮಕಾತಿ

ಬ್ರಾಹ್ಮಣರಿಗೆ ಉನ್ನತ ಹುದ್ದೆ, ದಲಿತ, ಬಿಲ್ಲವ, ಬಂಟರಿಗೆ ತ್ರಿಶೂಲ ವಿತರಣೆ | ಭಾಸ್ಕರ್ ಪ್ರಸಾದ್ ಕಿಡಿ

ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ

ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ಇತ್ತೀಚಿನ ಸುದ್ದಿ