ಯುವತಿಯ ಹೊಟ್ಟೆಯಿಂದ ಒಂದೂವರೆ ಕೆ.ಜಿ. ಕೂದಲು ಹೊರ ತೆಗೆದ ವೈದ್ಯರು!
ಮಡಿಕೇರಿ: ಯುವತಿಯೊಬ್ಬರ ಹೊಟ್ಟೆಯಿಂದ ಸುಮಾರು ಒಂದೂವರೆ ಕೆ.ಜಿ. ತೂಕದ ಕೂದಲಿನ ಗಡ್ಡೆಯನ್ನು ಮಡಿಕೇರಿಯ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್ ಮಾಡಿದಾಗ ವೈದ್ಯರಿಗೇ ಅಚ್ಚರಿ ಕಾದಿದ್ದು, ಹೊಟ್ಟೆಯೊಳಗೆ ಕೂದಲಿನಿಂದ ಕೂಡಿದ ಗಡ್ಡೆಯೊಂದು ಕಂಡು ಬಂದಿತ್ತು.
ಡಾ.ಅಜಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಸುದೀರ್ಘ ಶಸ್ತ್ರ ಚಿಕಿತ್ಸೆ ನಡೆಸಿ ಒಂದೂವರೆ ಕೆ.ಜಿ. ತೂಕದ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯುವತಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಯುವತಿಯು ತನ್ನ ಕೂದಲನ್ನು ತಾನೇ ಕಿತ್ತು ತಿನ್ನುವ ಹವ್ಯಾಸ ಹೊಂದಿದ್ದಳು ಎನ್ನಲಾಗಿದೆ. ಈ ಕೂದಲು ಹೊಟ್ಟೆಯೊಳಗೆ ಶೇಖರಣೆಯಾಗಿ ಗಡ್ಡೆಯಾಗಿ ಮಾರ್ಪಟ್ಟಿತ್ತು. ಇದರ ಪರಿಣಾಮವಾಗಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಇದೀಗ ವೈದ್ಯರ ಸತತ ಪ್ರಯತ್ನದಿಂದ ಯುವತಿ ಅಪಾಯದಿಂದ ಪಾರಾಗಿದ್ದಾಳೆ.
ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್ ಕುಮಾರ್, ಡಾ.ತಾರನಂದನ್ ಹಾಗೂ ಡಾ.ಪ್ರದೀಪ್ ವೈದ್ಯಕೀಯ ತಂಡದಲ್ಲಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಬಜರಂಗದಳದ ಕಾರ್ಯಕರ್ತರಿಂದ ತಲ್ವಾರ್ ನಿಂದ ದಾಳಿ!
ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರ ಬೇಕು? | ಸಿದ್ದರಾಮಯ್ಯಗೆ ಸಿ.ಟಿ.ರವಿ ಪ್ರಶ್ನೆ
ಬೈಕ್ ನ ಹಿಂಬದಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣಿಸಲು ಹೊಸ ರೂಲ್ಸ್
ಬೆಚ್ಚಿಬೀಳಿಸುವ ಘಟನೆ: ಇಬ್ಬರು ಮಕ್ಕಳನ್ನು ಕಟ್ಟಿ ಹಾಕಿ ಬೆಂಕಿ ಹಚ್ಚಿ, ಆತ್ಮಹತ್ಯೆಗೆ ಶರಣಾದ ತಾಯಿ!
ಶಾಕಿಂಗ್ ನ್ಯೂಸ್: ಯುವತಿಯ ಮೇಲೆ 10ನೇ ತರಗತಿಯ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ
ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03
ಕುಮಾರಸ್ವಾಮಿಯ ದಾಖಲೆ ನನ್ನ ಬಳಿ ಇದೆ, ಗೌರವ ಇಲ್ಲದೇ ಮಾತನಾಡಿದ್ರೆ ಸುಮ್ನಿರಲ್ಲ | ಜಮೀರ್ ಎಚ್ಚರಿಕೆ