ಪಾಕಿಸ್ತಾನದ ವಿರುದ್ಧ ಸೋತರೂ, ಭಾರತವೇ ವಿಶ್ವಕಪ್ ಗೆಲ್ಲಲಿದೆ | ವೀರೇಂದ್ರ ಸೆಹ್ವಾಗ್ ವಿಶ್ವಾಸ - Mahanayaka
12:09 PM Thursday 12 - December 2024

ಪಾಕಿಸ್ತಾನದ ವಿರುದ್ಧ ಸೋತರೂ, ಭಾರತವೇ ವಿಶ್ವಕಪ್ ಗೆಲ್ಲಲಿದೆ | ವೀರೇಂದ್ರ ಸೆಹ್ವಾಗ್ ವಿಶ್ವಾಸ

virender sehwag
28/10/2021

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ  ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡ ಹೀನಾಯವಾಗಿ ಸೋಲು ಅನುಭವಿಸಿದ್ದರೂ, ಭಾರತವೇ ವಿಶ್ವಕಪ್ ಗೆಲ್ಲಲಿದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯೋರ್ವನ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪ್ರಕಾರ ಭಾರತವೇ ವಿಶ್ವಕಪ್ ಗೆಲ್ಲಲಿದೆ ಅಂದಿದ್ದಾರೆ. ನಾವು ಇಲ್ಲಿಂದ ಮುಂದಕ್ಕೆ ಉತ್ತಮವಾಗಿ ಆಡಬೇಕಿದೆ. ನಾವು ಯಾವಾಗಲೂ ನಮ್ಮ ತಂಡ ಗೆದ್ದಾಗ ಹುರಿದುಂಬಿಸುತ್ತೇವೆ. ಸೋತಾಗ ಅದಕ್ಕಿಂತಲೂ ಹೆಚ್ಚು ಬೆಂಬಲಿಸಬೇಕು. ಭಾರತವೇ ವಿಶ್ವಕಪ್ ಗೆಲ್ಲಲಿದೆ ಎನ್ನುವುದು ನನ್ನ ನಂಬಿಕೆಯಾಗಿದೆ ಎಂದು ಸೆಹ್ವಾಗ್ ಹೇಳಿದರು.

ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಅಫ್ಘಾನಿಸ್ತಾನ, ಸ್ಕಾಟ್ಲೆಂಟ್ ಹಾಗೂ ನಮೀಬಿಯಾ ಸವಾಲನ್ನು ಎದುರಿಸಲಿದ್ದು, ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೂ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಲಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ