ಅಪ್ಪುವಿನ ಅಕಾಲಿಕ ನಿಧನ ಸಹಿಸಲಾಗದೇ ಅತ್ತು ಅತ್ತು ನಿತ್ರಾಣಗೊಂಡ ಶಿವರಾಜ್ ಕುಮಾರ್
ಬೆಂಗಳೂರು: ಪ್ರೀತಿಯ ತಮ್ಮನ್ನು ಕಳೆದುಕೊಂಡು ನಟ ಶಿವರಾಜ್ ಕುಮಾರ್ ಅವರು ತೀವ್ರ ದುಃಖಿತರಾಗಿದ್ದಾರೆ. ಪುನೀತ್ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತು ಶಿವರಾಜ್ ಕುಮಾರ್ ಅವರು ತೀವ್ರವಾಗಿ ಬಳಲಿ ಹೋಗಿರುವ ದೃಶ್ಯಗಳು ಕಂಡು ಬಂದಿದೆ.
ಇನ್ನೂ ಕಿಚ್ಚ ಸುದೀಪ್ ಅವರು ಕೂಡ ಪುನೀತ್ ಅವರನ್ನು ಕಳೆದುಕೊಂಡಿರುವ ಶಿವರಾಜ್ ಕುಮಾರ್ ಅವರ ಸ್ಥಿತಿಯ ಬಗ್ಗೆ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ನನಗಿಂತ 13 ವರ್ಷ ಚಿಕ್ಕವನಾಗಿರುವ ಅಪ್ಪುವನ್ನು ತೋಳಿನಲ್ಲಿ ಎತ್ತಿಕೊಂಡು ಆಟವಾಡಿಸಿದ್ದೆ ಎಂದು ಶಿವರಾಜ್ ಕುಮಾರ್ ಅವರು ತಮ್ಮ ಬಾಲ್ಯದಿಂದ ಈವರೆಗಿನ ಅನ್ಯೋನ್ಯತೆಯ ಬಂಧವನ್ನು ನೆನೆ ನೆನೆದು ದುಃಖಿತರಾಗಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಪುನೀತ್ ಜೊತೆಗೆ ಶಿವರಾಜ್ ಕುಮಾರ್ ಅವರು ವೇದಿಕೆ ಹಂಚಿಕೊಂಡಿದ್ದರು. ವೇದಿಕೆಯಲ್ಲಿ ಅಣ್ಣ ತಮ್ಮ ಜೊತೆಯಾಗಿ ಡಾನ್ಸ್ ಮಾಡಿದ್ದರು. ಪ್ರೀತಿಯ ಅಪ್ಪುಗೆ ಕೂಡ ಮಾಡಿದ್ದರು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಪುನೀತ್ ನಿಧನರಾಗಿದ್ದಾರೆ.
ಮಾಧ್ಯಮಗಳಲ್ಲಿ ಕಂಡು ಬಂದಂತೆ ಶಿವರಾಜ್ ಕುಮಾರ್ ಅವರು ಬಿಕ್ಕಿ ಬಿಕ್ಕಿ ಅಳುತ್ತಾ, ನಿತ್ರಾಣವಾಗಿದ್ದಾರೆ. ಅವರಿಂದ ಪುನೀತ್ ಅವರ ಅಗಲಿಕೆಯನ್ನು ಸಹಿಸಲು ಸಾಧ್ಯವಾಗದಿರುವ ಮಟ್ಟಕ್ಕೆ ಅವರ ದುಃಖ ಕಂಡು ಬಂದಿದೆ. ಜೊತೆಗಿರುವವರು ಏನೆಂದು ಸಮಾಧಾನಪಡಿಸಬೇಕು ಎಂದು ತಿಳಿಯದೇ ಅಸಹಾಯಕರಾಗಿ ನಿಂತಿರುವುದು ಕಂಡು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka