ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದಲ್ಲ, ಸಡನ್ ಡೆತ್!
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿಲ್ಲ. ದಿಢೀರ್ ಹೃದಯ ನಿಂತು ಹೋಗಿದೆ ಎಂದು ಡಾ.ರಾಜ್ ಕುಮಾರ್ ಕುಟುಂಬದ ವೈದ್ಯ ಡಾ.ರಮಣರಾವ್ ಭಾವುಕರಾಗಿ ನುಡಿದಿದ್ದಾರೆ.
ನಮ್ಮ ಚಿಕಿತ್ಸಾಲಯಕ್ಕೆ ಅಪ್ಪು ಮತ್ತು ಪುನೀತ್ ಆಗಮಿಸಿದ್ದರು. ಏನಾಯಿತು ಎಂದು ವಿಚಾರಿಸಿದೆ. ಈ ವೇಳೆ ದೇಹಕ್ಕೆ ಸ್ವಲ್ಪ ಸುಸ್ತು ಹಾಗೂ ಆಯಾಸವಾದಂತಿದೆ ಎಂದು ಹೇಳಿದರು. ಏಕೆ ಇಷ್ಟೊಂದು ಬೆವರಿದ್ದೀರಿ ಎಂದು ಕೇಳಿದಾಗ ವ್ಯಾಯಾಮ ಮಾಡಿ ಇಲ್ಲಿಗೆ ಬಂದಿದ್ದಿದ್ದೇನೆ. ಹಾಗಾಗಿ ಬೆವರುವುದು ಸಹಜ ಎಂದು ಹೇಳಿದರು.
ಅವರ ಆರೋಗ್ಯ ತಪಾಸಣೆ ನಡೆಸಿದಾಗ ರಕ್ತದೊತ್ತಡ, ಹೃದಯ ಬಡಿತ ಇತ್ಯಾದಿ ನಾರ್ಮಲ್ ಆಗಿತ್ತು. ತಕ್ಷಣವೇ ಇಸಿಜಿ ಮಾಡಿಸಿದೆವು. ಹೃದಯ ಬಡಿತ ಸರಿಯಾಗಿದ್ದರೂ ಸ್ಟ್ರೈನ್ ಕಾಣಿಸಿಕೊಂಡಿತು. ಹಾಗಾಗಿ ಮುಂದಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ರಮಣರಾವ್ ಭಾವುಕರಾಗಿ ನುಡಿದರು.
ಅಪ್ಪುಗೆ ಹೃದಯಾಘಾತವಾಗಿಲ್ಲ. ವೈದ್ಯಕೀಯ ಭಾಷೆಯಲ್ಲಿ ಹೇಳಬೇಕೆಂದರೆ, ಸಡನ್ ಡೆತ್ ಅಥವಾ ಕಾರ್ಡಿಯಕ್ ಅರೆಸ್ಟ್ ಎನ್ನುತ್ತಾರೆ. ಹಾಗಾಗಿ ಅಪ್ಪು ಇಂತಹದ್ದೇ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಮಣರಾವ್ ಮಾಹಿತಿ ನೀಡಿದ್ದಾರೆ.
ದಿನ ನಿತ್ಯ ಪುನೀತ್ ಅವರು ದೇಹವನ್ನು ದಂಡಿಸುತ್ತಿದ್ದರು. ಹಾಗಾಗಿ ಅವರಿಗೆ ಹೃದಯಾಘಾತವಾಗಲು ಸಾಧ್ಯವಿರಲಿಲ್ಲ. ಹಾಗೆಯೇ ಅವರ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಕೂಡ ಇರಲಿಲ್ಲ. ಅವರು ಆಗಾಗ ಆರೋಗ್ಯ ತಪಾಸಣೆ ಕೂಡ ಮಾಡಿಸಿಕೊಳ್ಳುತ್ತಿದ್ದರು. ಜ್ವರ, ಶೀತ ಬಂದಾಗಲೂ ಕ್ಲೀನಿಕ್ ಗೆ ಬರುತ್ತಿದ್ದರು. ಪ್ರವಾಸ ಮಾಡಿದಾಗ ಕ್ಲಿನಿಕ್ ಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಇಡೀ ಕುಟುಂಬದಲ್ಲಿ ಆರೋಗ್ಯವಂತರಾಗಿದ್ದ ವ್ಯಕ್ತಿ ಅಪ್ಪು ಆಗಿದ್ದು, ಅವರಿಗೆ ಹೀಗೆ ಆಗಿದೆ ಎಂದರೆ ಅರಗಿಸಿಕೊಳ್ಳುವುದು ಕಷ್ಟ ಎಂದು ಅವರು ನೋವು ಹಂಚಿಕೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka