ಪುನೀತ್ ನಿಧನಕ್ಕೆ ಭಾವುಕರಾದ ಅಲ್ಲು ಅರ್ಜುನ್ | ತೆಲುಗು ಚಿತ್ರ ವೇದಿಕೆಯಲ್ಲಿ ಮೌನ ಪ್ರಾರ್ಥನೆ
ಸಿನಿ ಡೆಸ್ಕ್: ಪುನೀತ್ ರಾಜ್ ಕುಮಾರ್ ನಿಧನಕ್ಕೆ ತೆಲುಗು ಚಿತ್ರರಂಗ ಮರುಗಿದ್ದು, ವಿಜಯ್ ದೇವರ ಕೊಂಡ ಸಹೋದರ ಆನಂದ್ ದೇವರ ಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ವೇದಿಕೆಯಲ್ಲಿ ಅಪ್ಪು ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ಎರಡು ನಿಮಿಷಗಳ ಮೌನ ಪ್ರಾರ್ಥನೆಯ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇನ್ನೂ ಅಪ್ಪು ನಿಧನದ ವಾರ್ತೆಯನ್ನು ಮೊದಲು ಕೇಳಿದಾಗ ನನಗೆ ತುಂಬಾ ಶಾಕ್ ಆಯಿತು. ಬದುಕು ತೀರಾ ಅನಿಶ್ಚಿತ. ಚಿಟಿಕೆ ಹೊಡೆಯುವಷ್ಟರಲ್ಲಿ ಏನು ಬೇಕಾದರೂ ಆಗಬಹುದು ಎಂದು ಅನ್ನಿಸಿತು. ಎಂತಹ ದೊಡ್ಡ ಸೂಪರ್ ಸ್ಟಾರ್ ಆಗಿದ್ದರು ಪುನೀತ್ ರಾಜ್ ಕುಮಾರ್. ತುಂಬ ಒಳ್ಳೆಯ ವ್ಯಕ್ತಿ. ಕನ್ನಡ ಚಿತ್ರರಂಗಕ್ಕೆ ಅವರು ತುಂಬಾ ಕೊಡುಗೆ ನೀಡಿದ್ದರು. ನಮ್ಮ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯಾಗಿದ್ದರು ಎಂದು ಅವರು ಹೇಳಿದರು.
ನನಗೆ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೂ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡಾನ್ಸ್ ಕಾರ್ಯಕ್ರಮದಲ್ಲಿ ನಾವು ಜಡ್ಜ್ ಆಗಿದ್ದೆವು. ಯಾವಾಗ ಮಾತನಾಡಿದರೂ, ಬೆಂಗಳೂರಿಗೆ ಬನ್ನಿ ಅಂತ ಆಹ್ವಾನಿಸುತ್ತಿದ್ದರು. ಆದರೆ ಇಂದು ಸಡನ್ ಆಗಿ ಅವರು ಇಲ್ಲ ಎಂಬುವುದನ್ನು ನಂಬಲಾಗುತ್ತಿಲ್ಲ ಎಂದು ಅಲ್ಲು ಅರ್ಜುನ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka