ದಕ್ಷಿಣ ಕನ್ನಡ: ಸಿಡಿಲು ಬಡಿದು ಇಬ್ಬರು ದಾರುಣ ಸಾವು | ಮೂವರಿಗೆ ಗಂಭೀರ ಗಾಯ
ಮೂಡುಬಿದಿರೆ: ಸೋಮವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಸಿಡಿಲು ಸಹಿತ ಭಾರೀ ಮಳೆಯ ವೇಳೆ ಸಿಡಿಲು ಬಡಿದು ಇಬ್ಬರು ದಾರುಣವಾಗಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಘಟನೆ ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲು ಎಂಬಲ್ಲಿ ನಡೆದಿದೆ.
ಇಲ್ಲಿನ ಆರ್ಬಿ ಪರಿಸರದಲ್ಲಿ ಶೆಡ್ ವೊಂದರಲ್ಲಿ ವಾಸಿಸುತ್ತಿದ್ದ ಕಾರ್ಮಿಕರಾದ 25 ವರ್ಷ ವಯಸ್ಸಿನ ಯಶವಂತ್ ಹಾಗೂ ಮಣಿಪ್ರಸಾದ್ ಸಿಡಿಲು ಬಡಿದು ಮೃತಪಟ್ಟವರಾಗಿದ್ದು, ಇದೇ ಪರಿಸರದಲ್ಲಿ ಇನ್ನೂ ಮೂವರು ಕೂಡ ಸಿಡಿಲಿನ ಆಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಣೇಶ್, ಸಂದೀಪ್ ಹಾಗೂ ಪ್ರವೀಣ್ ಎಂಬವರು ಗಾಯಾಳುಗಳಾಗಿದ್ದು, ಇವರನ್ನು ಇಲ್ಲಿನ ಆಲಂಗಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ವಿವಿಧೆಡೆಗಳಲ್ಲಿ ಭಾರೀ ಸಿಡಿಲು ಸಹಿತ ಮಳೆಯಾಗಿದ್ದು, ಮೂಡುಬಿದಿರೆಯಲ್ಲಿ ಇದೀಗ ಸಿಡಿಲು ಇಬ್ಬರನ್ನು ಬಲಿಪಡೆದುಕೊಂಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka