ಮದುವೆಯಾಗಿ ನಾಲ್ಕೇ ದಿನದಲ್ಲಿ ಸಾವಿನ ಮನೆಗೆ ಹೊರಟು ಹೋದ ನವದಂಪತಿ!
ತಿರುವಳ್ಳೂರು: ನಾಲ್ಕು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವ ಜೋಡಿಯೊಂದು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.
ಪೂನಮೆಲೀ-ಅರಕ್ಕೊಣಮ್ ಹೆದ್ದಾರಿಯಲ್ಲಿ ಕಡಂಬಥೂರ್ ಸಮೀಪ ಭಾನುವಾರ ರಾತ್ರಿ 9:45ರ ಸುಮಾರಿಗೆ ನವ ದಂಪತಿ ಪ್ರಯಾಣಿಸುತ್ತಿದ್ದ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ಮಗುಚಿ ಬಿದ್ದಿದ್ದು,, ಪರಿಣಾಮವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಅರಕ್ಕೋಣಮ್ ಮೂಲದ 31 ವರ್ಷ ವಯಸ್ಸಿನ ಮನೋಜ್ ಕುಮಾರ್ ಹಾಗೂ ಪೆರುಗಲಥೂರ್ ಮೂಲದ 30 ವರ್ಷ ವಯಸ್ಸಿನ ಕಾರ್ತಿಕಾ ಮೃತ ದಂಪತಿಯಾಗಿದ್ದಾರೆ. ಮನೋಜ್ ಕುಮಾರ್ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರೆ, ಕಾರ್ತಿಕಾ ಖಾಸಗಿ ಕ್ಲೀನಿಕ್ ವೊಂದರಲ್ಲಿ ವೈದ್ಯೆಯಾಗಿದ್ದರು ಎನ್ನಲಾಗಿದ್ದು, ಅಕ್ಟೋಬರ್ 28ರಂದು ಇವರಿಬ್ಬರು ಮದುವೆಯಾಗಿದ್ದರು. ಭಾನುವಾರ ಕಾರ್ತಿಕಾ ಮನೆಗೆ ಹೋಗಿ ಅರಕ್ಕೋಣಮ್ ಗೆ ಹಿಂದಿರುಗುತ್ತಿದ್ದ ವೇಳೆ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ವೇಗವಾಗಿ ಬಂದು ತಿರುವು ಪಡೆದುಕೊಳ್ಳಲು ಯತ್ನಿಸಿದ್ದು, ಈ ವೇಳೆ ಆಯ ತಪ್ಪಿ ಕಾರಿನ ಮೇಲೆ ಬಿದ್ದಿದೆ.
ಲಾರಿ ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಮೇಲಿನಿಂದ ಲಾರಿಯನ್ನು ತೆರವು ಮಾಡಲು 2 ಗಂಟೆಗಳ ಕಾಲ ಸಮಯ ಹಿಡಿದಿದೆ. ಅಷ್ಟರಲ್ಲೇ ಕಾರಿನಲ್ಲಿದ್ದ ದಂಪತಿ ಪ್ರಾಣ ಬಿಟ್ಟಿದ್ದರು. ಇನ್ನೂ ಘಟನೆಯ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka