ಅಪ್ಪು ಅಂತಿಮ ದರ್ಶನ ಪಡೆದು ಹೋಗಿದ್ದ ತೆಲುಗು ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು! - Mahanayaka
10:36 AM Thursday 12 - December 2024

ಅಪ್ಪು ಅಂತಿಮ ದರ್ಶನ ಪಡೆದು ಹೋಗಿದ್ದ ತೆಲುಗು ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು!

nambodiri balakrishna
02/11/2021

ಹೈದರಾಬಾದ್:  ತೆಲುಗು ಖ್ಯಾತ ಚಲನ ಚಿತ್ರ ನಟ ನಂದಮೂರಿ ಬಾಲಕೃಷ್ಣ ಅನಾರೋಗ್ಯದ ಹಿನ್ನೆಲೆಯಲ್ಲಿ  ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು, ಶನಿವಾರವಷ್ಟೇ ಅವರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು.

ಮಾಹಿತಿಗಳ ಪ್ರಕಾರ ನಟ ನಂದಮೂರಿ ಬಾಲಕೃಷ್ಣ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.  ಹಲವು ದಿನಗಳಿಂದ ಅವರು ಭುಜದ ನೋವಿನಿಂದ ಬಳಲುತ್ತಿದ್ದರು  ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅವರು, ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದಿದ್ದರು.  ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ನಾವು ಒಂದೇ ಕುಟುಂಬದಲ್ಲಿ ಹುಟ್ಟಿರದೇ ಇದ್ದರೂ, ಸಹೋದರರಿದ್ದಂತೆ. ಹಲವು ಬಾರಿ ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಭೇಟಿಯಾಗಿದ್ದೇನೆ. ಪುನೀತ್ ಇಲ್ಲವೆನ್ನುವುದನ್ನು ನಂಬಲು ಆಗ್ತಾ ಇಲ್ಲ ಎಂದಿದ್ದರು.

ಇತ್ತೀಚಿನ ಸುದ್ದಿ