ಕೊನೆಗೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಳಿಕೆಯಾಗಿದೆಷ್ಟು ಗೊತ್ತಾ?
ನವದೆಹಲಿ: ಕಳೆದ ಹಲವು ಸಮಯಗಳಿಂದ ನಿರಂತರವಾಗಿ ಏರುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ಬೆಲೆ ಇದೀಗ ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು, ಆದರೂ ಈಗಲೂ ಪೆಟ್ರೋಲ್, ಡೀಸೆಲ್ ದುಬಾರಿಯೇ ಆಗಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಗೆ 5 ರೂಪಾಯಿ ಇಳಿಕೆ ಮಾಡಿದ್ದು, ಡೀಸೆಲ್ ಬೆಲೆ 10 ರೂಪಾಯಿ ಇಳಿಕೆ ಮಾಡಿದೆ. ತೈಲ ಬೆಲೆ 100ರ ಗಡಿದಾಟಿದ್ದರೂ ಕೇಂದ್ರ ಸರ್ಕಾರ ಮೌನವಹಿಸಿತ್ತು. ಇದರ ವಿರುದ್ಧ ವ್ಯಾಪಕ ಆಕ್ರೋಶ ಕೂಡ ಕೇಳಿ ಬಂದಿತ್ತು.
ತೈಲ ಬೆಲೆ 100 ದಾಟಿದರೂ ಸರ್ಕಾರ ಏಕೆ ಸುಂಕ ಕಡಿತ ಮಾಡಿ ಜನರ ಹೊರೆಯನ್ನು ಇಳಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಕೂಡ ಟೀಕಿಸಿದ್ದವು. ಆದರೂ ಬೆಲೆ ಇಳಿಕೆಯಾಗಿರಲಿಲ್ಲ. ಇದೀಗ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದಿಡೀರನೇ ಪೆಟ್ರೋಲ್ ಬೆಲೆ 5 ರೂಪಾಯಿ ಇಳಿಕೆ ಮಾಡಿದ್ದರೆ, ಡೀಸೆಲ್ ಬೆಲೆ 10 ರೂಪಾಯಿ ಇಳಿಕೆ ಮಾಡಿದೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆ ತೀರಾ ಕಡಿಮೆ ಏನೂ ಆಗಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇಂದು ಮಧ್ಯ ರಾತ್ರಿಯಿಂದ ಪೆಟ್ರೋಲ್ ಗೆ 5 ರೂ. ಡೀಸೆಲ್ ಗೆ 10 ರೂ. ಇಳಿಕೆಯಾಗಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka