ಕರ್ನಾಟಕ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ 7 ರೂ. ಇಳಿಕೆ: ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್(VAT) ಇಳಿಕೆ ಮಾಡಿದೆ.
ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬುಧವಾರ ತಿಳಿಸಿದ್ದು, ನವೆಂಬರ್ 4ರ ಸಂಜೆ ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಮೇಲೆ ಕೂಡ 7 ರೂಪಾಯಿ ಇಳಿಕೆ ಮಾಡುತ್ತಿದ್ದೇವೆ ಎಂದು ಅವರು ಘೋಷಿಸಿದ್ದಾರೆ.
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಧನದ ದರದ ಹೊರೆ ಇಳಿಸುವ ಮೂಲಕವಾಗಿ ದೀಪಾವಳಿಗೆ ಅದ್ಭುತವಾದ ಉಡುಗೊರೆ ನೀಡಿದ್ದಾರೆ. ಈ ಹಬ್ಬಕ್ಕೆ ಸ್ಫೂರ್ತಿ ತುಂಬುವುದಕ್ಕೆ ಕರ್ನಾಟಕ ಸರ್ಕಾರ ಕೂಡ ಬೆಲೆ ಇಳಿಕೆ ಮಾಡಿದೆ ಎಂದು ಅವರು ಹೇಳಿದರು.
ಈ ನಿರ್ಧಾರದಿಂದ ನಮ್ಮ ಬೊಕ್ಕಸಕ್ಕೆ 2100 ಕೋಟಿ ರೂಪಾಯಿ ಹೊರೆಯಾದರೂ ನಮ್ಮ ನಾಗರಿಕರಿಗೆ 95.90 ಮತ್ತು 81.50 (ಅಂದಾಜು) ಪೆಟ್ರೋಲ್ ಮತ್ತು ಡೀಸೆಲ್ಗೆ ಕ್ರಮವಾಗಿ ದರವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರಿದ್ದರಿಂದಾಗಿ ಜನರು ತಮ್ಮ ವಾಹನಗಳನ್ನು ಬಿಟ್ಟು ಬಸ್ ನಲ್ಲಿ ಸಂಚರಿಸುವಂತಹ ಸಂದಿಗ್ಧ ಪರಿಸ್ಥಿತಿ ಸೃಷ್ಟಿಯಾಗಿತ್ತು. ದೇಶಾದ್ಯಂತ ವ್ಯಾಪಕ ಆಕ್ರೋಶವಾದ ಬೆನ್ನಲ್ಲೇ ಇದೀಗ ದೀಪಾವಳಿ ಸಂದರ್ಭದಲ್ಲಿ ಬೆಲೆ ಇಳಿಕೆ ಮಾಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka