ಬಸ್ ನಲ್ಲಿ ಯುವತಿಯರ ವಿಡಿಯೋ ಮಾಡುತ್ತಿದ್ದ ವಿಕೃತ ವ್ಯಕ್ತಿಯ ಅರೆಸ್ಟ್!
ಮಂಗಳೂರು: ಬಸ್ಸಿನಲ್ಲಿ ಮೊಬೈಲ್ ನಿಂದ ಯುವತಿಯರ ವಿಡಿಯೋ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದು, ಬಸ್ಸಿನಲ್ಲಿ ಮಹಿಳೆಯರ ವಿಡಿಯೋವನ್ನು ಮಾಡುತ್ತಿದ್ದ ವೇಳೆ ಸಹ ಪ್ರಯಾಣಿಕ ಗಮನಿಸಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಮಡಿಕೇರಿ ಮೂಲದ 40 ವರ್ಷ ವಯಸ್ಸಿನ ವ್ಯಕ್ತಿ ಯೂಸೂಫ್ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದ ಯೂಸೂಫ್ ಮಂಗಳೂರಿನ ಕಂಕನಾಡಿ ತಲುಪುವ ವೇಳೆ ಮೊಬೈಲ್ ನಲ್ಲಿ ಯುವತಿಯರ ವಿಡಿಯೋ ಮಾಡುತ್ತಿರುವುದನ್ನು ಸಹ ಪ್ರಯಾಣಿಕ ಗಮನಿಸಿದ್ದು, ತಕ್ಷಣವೇ ಆತ ಇದನ್ನು ಪ್ರಶ್ನಿಸಿ ಯೂಸುಫ್ ಗೆ ಥಳಿಸಿದ್ದಾನೆ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಬಸ್ ನ ಸಿಬ್ಬಂದಿ ಆರೋಪಿಯ ಬಗ್ಗೆ ಕಂಕನಾಡಿ ನಗರ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka