ಶಾಕಿಂಗ್ ನ್ಯೂಸ್: ಕಾರ್ಯಕರ್ತನ ಪತ್ನಿಯನ್ನು ಅಪಹರಿಸಿದ ಬಜರಂಗದಳದ ಮುಖಂಡ!
ಮೂಡುಬಿದಿರೆ: ಬಜರಂಗದಳದ ಮುಖಂಡನೋರ್ವ ಕಾರ್ಯಕರ್ತನ ಪತ್ನಿಯನ್ನೇ ಅಪಹರಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಬಜರಂಗದಳದ ಬಜಗೋಳಿ ವಲಯ ಸಂಚಾಲಕ ಸಂದೀಪ್ ಆಚಾರ್ಯ, ಬಜರಂಗದಳದ ಕಾರ್ಯಕರ್ತನೆನ್ನಲಾಗಿರುವ ಶಿರ್ಲಾಲು ಹೈಸ್ಕೂಲ್ ಬಳಿಯ ಹಾಡಿಯಂಗಡಿ ನಿವಾಸಿ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿರುವುದಾಗಿ ಅಪಹರಣಕ್ಕೊಳಗಾದ ಮಹಿಳೆಯ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಮಹಿಳೆಯು ವಾರದ ಹಿಂದೆ ತನ್ನ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ಹೋಗಿದ್ದು, ಈ ಸಂದರ್ಭ ಬಜರಂಗದಳದ ಮುಖಂಡ ಸಂದೀಪ್ ಆಚಾರ್ಯ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಆರೋಪಿ ಹಾಗೂ ಮಹಿಳೆಯನ್ನು ಪತ್ತೆ ಹಚ್ಚಲಾಗಿದ್ದು, ಮಹಿಳೆಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka