ಟ್ಯಾಂಕರ್ ಸ್ಫೋಟ: 92 ಮಂದಿ ಸುಟ್ಟು ಕರಕಲು | 30 ಜನ ಸಾವು ಬದುಕಿನ ನಡುವೆ ಹೋರಾಟ - Mahanayaka
6:24 PM Wednesday 5 - February 2025

ಟ್ಯಾಂಕರ್ ಸ್ಫೋಟ: 92 ಮಂದಿ ಸುಟ್ಟು ಕರಕಲು | 30 ಜನ ಸಾವು ಬದುಕಿನ ನಡುವೆ ಹೋರಾಟ

tankar
06/11/2021

ಫ್ರೀಟೌನ್: ತೈಲ ಟ್ಯಾಂಕರ್ ಮಗುಚಿ ಬಿದ್ದಿದ್ದು, ಈ ವೇಳೆ ಅಪಾಯವನ್ನರಿಯದೇ ತೈಲ ಸಂಗ್ರಹಿಸಲು ಮುಂದಾದ 92 ಮಂದಿ ಸುಟ್ಟು ಭಸ್ಮವಾದ ಘಟನೆ ಸಿಯೆರಾ ಲಿಯೋನ್ ರಾಜಧಾನಿಯಲ್ಲಿ ನಡೆದಿದ್ದು, 30 ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಟ್ಯಾಂಕರ್ ಮಗುಚಿ ಬಿದ್ದ ಸಂದರ್ಭದಲ್ಲಿ ಕೆಲವರು  ತೈಲ ಸಂಗ್ರಹಿಸಲು ಟ್ಯಾಂಕರ್ ಬಳಿಗೆ ಹೋಗಿದ್ದಾರೆನ್ನಲಾಗಿದೆ. ಈ ವೇಳೆ ಏಕಾಏಕಿ ಟ್ಯಾಂಕರ್ ಸ್ಫೋಟಗೊಂಡಿದೆ. ಈ ವೇಳೆ 92 ಮಂದಿ ಸಜೀವ ದಹನವಾಗಿದ್ದಾರೆ.  ಮಾಹಿತಿಗಳ ಪ್ರಕಾರ ಟ್ಯಾಂಕರ್ ಸ್ಫೋಟಕ್ಕೆ ಮುಖ್ಯ ಕಾರಣ ತೈಲ ತುಂಬಿದ ಟ್ಯಾಂಕರ್ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿರುವುದು ಎಂದು ತಿಳಿದು ಬಂದಿದೆ.

ಅಧ್ಯಕ್ಷ ಜೂಲಿಯಸ್ ಮಾದಾ ಬಯೋ ಘಟನೆಯ ಸಂಬಂಧ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದೊಂದು ಭಯಾನಕ ಜೀವ ಹಾನಿ ಎಂದು ಘಟನೆಯನ್ನು ವ್ಯಾಖ್ಯಾನಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತು ದುರಂತದಲ್ಲಿ ಅಂಗವಿಕಲರಾದವರಿಗೆ ನನ್ನ ಆಳವಾದ ಸಂತಾಪಗಳು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ