ಮುಸ್ಲಿಮರ ಮತಕ್ಕಾಗಿ ಸುನ್ನತ್ ಬೇಕಾದರೂ ಮಾಡಿಸಿಕೊಳ್ಳುತ್ತಾರೆ | ಬಿಜೆಪಿ ಸಚಿವನ ವಿವಾದಿತ ಹೇಳಿಕೆ
ಬರಿಲ್ಲಾ: ಅಖಿಲೇಶ್ ಯಾದವ್ ಮುಸ್ಲಿಮರ ಮತಕ್ಕಾಗಿ ಸುನ್ನತ್ ಬೇಕಾದ್ರೂ ಮಾಡಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಸಚಿವ ಸ್ವರೂಪ್ ಶುಕ್ಲಾ(Anand Swarup Shukla) ವಿವಾದಿತ ಹೇಳಿಕೆ ನೀಡಿದ್ದು, ಈ ಕೀಳು ಮಟ್ಟದ ಹೇಳಿಕೆ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಭೆಯೊಂದರಲ್ಲಿ ಮಾತನಾಡಿದ ಶುಕ್ಲಾ, ದೇಶ ವಿಭಜನೆಗೆ ಕಾರಣವಾದ ಮಹಮ್ಮದ್ ಅಲಿ ಜಿನ್ನಾರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರನೆಂದು ಕರೆದು, ಹೀರೋ ಎಂದು ಅಖಿಲೇಶ್ ಬಣ್ಣಿಸಿದ್ದಾರೆ. ಮುಸ್ಲಿಮರ ಮತಕ್ಕಾಗಿ ಅಖಿಲೇಶ್ ‘ಸುನ್ನತ್’ ಬೇಕಾದರೂ ಮಾಡಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಅಖಿಲೇಶ್ ಯಾದವ್ ಗೆ ಪಾಕ್ ನ ಗುಪ್ತಚರ ಇಲಾಖೆ ಐಎಸ್ ಐನಿಂದ ದುಡ್ಡು ಬರುತ್ತಿದೆ ಎಂದೂ ಶುಕ್ಲಾ ಆರೋಪಿಸಿದ್ದಾರೆ. ಶುಕ್ಲಾ ಹೇಳಿಕೆ ವಿರುದ್ಧ ಎಸ್ ಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಶುಕ್ಲಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka