ಆತ್ಮಹತ್ಯೆಗೆ ಶರಣಾದ ಪುನೀತ್ ಅಭಿಮಾನಿಯ ಮನೆಗೆ ರಾಘವೇಂದ್ರ ರಾಜ್ ಕುಮಾರ್ ಭೇಟಿ - Mahanayaka
10:12 AM Thursday 12 - December 2024

ಆತ್ಮಹತ್ಯೆಗೆ ಶರಣಾದ ಪುನೀತ್ ಅಭಿಮಾನಿಯ ಮನೆಗೆ ರಾಘವೇಂದ್ರ ರಾಜ್ ಕುಮಾರ್ ಭೇಟಿ

raghavendra rajkumar
08/11/2021

ರಾಮನಗರ: ಚನ್ನಪಟ್ಟಣದ ಎಲೆಕೇರಿಯಲ್ಲಿ ಆತ್ಮಹತ್ಯೆಗೆ ಶರಣಾದ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯ ಮನೆಗೆ ನಟ, ಪುನೀತ್ ರಾಜ್ ಕುಮಾರ್ ಅವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪುನೀತ್ ನಿಧನದಿಂದ ಖಿನ್ನತೆಗೆ ಜಾರಿದ್ದ 25 ವರ್ಷ ವಯಸ್ಸಿನ ವೆಂಕಟೇಶ್ ಎಂಬವರು  ನವೆಂಬರ್ 4ರಂದು  ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದರು. ಅದನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವುಳ್ಳವರಿಗೆ ಕಸಿ ಮಾಡಲಾಗಿತ್ತು.

ಭಾನುವಾರ ಎಲೆಕೇರಿಗೆ ಬಂದ ರಾಘವೇಂದ್ರ ರಾಜ್ ಕುಮಾರ್ ಅರ್ಧ ಗಂಟೆಗೂ ಅಧಿಕ ಕಾಲ ವೆಂಕಟೇಶ್ ಕುಟುಂಬಸ್ಥರ ಜೊತೆಗೆ ಮಾತನಾಡಿದರು. ಜೊತೆಗೆ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ