ಮಾದಕ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು | ಪತಿ ಅರೆಸ್ಟ್

ಸಿನಿಡೆಸ್ಕ್: ಮಾದಕ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಅವರ ಪತಿ ಸ್ಯಾಮ್ ಬಾಂಬೆ ಅವರನ್ನು ಬಂಧಿಸಲಾಗಿದ್ದು, ಪತಿ ಪತ್ನಿಯರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಪತಿ ಸ್ಯಾಮ್ ಬಾಂಬೆ ಪೂನಂ ಪಾಂಡೆಗೆ ಹಲ್ಲೆ ನಡೆದಿದ್ದಾರೆ ಎನ್ನಲಾಗಿದೆ.
ಪೂನಂ ಪಾಂಡೆಯ ಒಂದು ಕಣ್ಣು ಮತ್ತು ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪೂನಂ ಪಾಂಡೆ ಅವರ ದೂರಿನನ್ವಯ ಬಾಂದ್ರಾ ಪೊಲೀಸರು ಕ್ರಮಕೈಗೊಂಡಿದ್ದು, ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದಾರೆ.
ಇನ್ನೂ ಪೊಲೀಸರು ನೀಡಿರುವ ದೂರಿನ ಪ್ರಕಾರ, ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಪೂನಂ ಪಾಂಡೆ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ನೀಡುವಾಗ ಪೊಲೀಸರು ಆಕೆಯನ್ನು ಏಕೆ ದಾಖಲಿಸಿದ್ದಾರೆ ಎಂದು ಪ್ರಸ್ತಾಪಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka