ಅಭಿಮಾನಿ ದೇವ್ರುಗಳಿಗೆ ಅನ್ನ ಸಂತರ್ಪಣೆ: “ಅಪ್ಪುವಿನ ಕನಸು ಇಂದು ನಿಜವಾಯಿತು”
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದಲೇ ಅನ್ನ ಸಂತರ್ಪಣೆ ಆರಂಭವಾಯಿತು.
ಒಂದು ಬಾರಿಗೆ ಸುಮಾರು 5 ಸಾವಿರ ಜನರು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. 4 ಸಾವಿರ ಮಾಂಸಾಹಾರಿ ಹಾಗೂ ಒಂದು ಸಾವಿರ ಸಸ್ಯಹಾರಿ ಕೌಂಟರ್ ಗಳನ್ನು ಸಿದ್ಧಪಡಿಸಲಾಗಿದೆ. 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ ಟೇಬಲ್ ಹಾಕಲಾಗಿದೆ.
ಇನ್ನೂ ಅನ್ನ ಸಂತರ್ಪಣೆಗೆ ಸಾಗರ ರೀತಿಯಲ್ಲಿ ಅಪ್ಪು ಫ್ಯಾನ್ಸ್ ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ದೊಡ್ಡ ಜನ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಇನ್ನೂ ಅಭಿಮಾನಿಗಳು ಪ್ಯಾಲೇಸ್ ಗ್ರೌಂಡ್ ಗೆ ಸಾಲಾಗಿ ಬರುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಬಳಿಕ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದರು.
ಅನ್ನ ಸಂತರ್ಪಣೆಯ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ಪುನೀತ್ ಆಸೆ ಈ ರೀತಿ ನೆರವೇರಬೇಕೆಂಬುದು ದೇವರ ಇಚ್ಛೆ. ದೇವರ ಇಚ್ಛೆ ಈ ರೀತಿ ಇದ್ದಿರಬಹುದು. ಅಪ್ಪುವಿನಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಎಡಗೈಯಲ್ಲಿ ಮಾಡಿದ್ದು, ಬಲಗೈಗೆ ಗೊತ್ತಾಗಬಾರದು ಅದನ್ನೇ ನಾವೆಲ್ಲರೂ ಅನುಸರಿಸಬೇಕು ಎಂದು ಶಿವರಾಜ್ ಕುಮಾರ್ ಹೇಳಿದರು.
ಇನ್ನೂ, ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಜನರಿಗೆ ಊಟ ಹಾಕಬೇಕು ಎನ್ನುವುದು ಅಪ್ಪುವಿನ ಕನಸಾಗಿತ್ತು. ಆ ಕನಸು ನನಸಾಗುತ್ತಿದೆ. ಅಪ್ಪು ನಿಮ್ಮ ಜೊತೆಗೆ ಬದುಕುತ್ತಿದ್ದಾರೆ. ನಮಗಾಗಿ ಅಪ್ಪು ಒಳ್ಳೆಯ ಕೆಲಸಗಳನ್ನು ಬಿಟ್ಟು ಹೋಗಿದ್ದಾನೆ. ಅದನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗೋಣ ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka