ಪುನೀತ್ ಅಗಲಿಕೆ ಸಹಿಸದೇ ಕೈಯಲ್ಲಿ ಬರೆ ಎಳೆದು “ಅಪ್ಪು” ಹೆಸರು ಬರೆದುಕೊಂಡ ಅಭಿಮಾನಿ!
ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯನ್ನು ಸಹಿಸದ ಅಭಿಮಾನಿಯೋರ್ವ ತನ್ನ ಕೈಗೆ ಬರೆ ಹಾಕಿಕೊಂಡು ಅಪ್ಪುವಿನ ಹೆಸರು ಬರೆದ ಘಟನೆ ನಡೆದಿದ್ದು, ಅಪ್ಪು ಅವರ ನಿಧನ ಸಹಿಸಲಾಗದೇ ಅಭಿಮಾನಿಗಳು ನಡೆಸುತ್ತಿರುವ ಅತಿರೇಕದ ವರ್ತನೆ ಇದೀಗ ಆತಂಕಕ್ಕೆ ಕಾರಣವಾಗಿದೆ.
ಪುನೀತ್ ರಾಜ್ ಕುಮಾರ್ ಅವರ ಫೋಟೋಗೆ ಪೂಜೆ ಸಲ್ಲಿಸಿದ ದಾವಣಗೆರೆ ಜಿಲ್ಲೆಯ ಕೆರೆಯಾಗಳಹಳ್ಳಿಯ ಅಭಿಮಾನಿ ಜೀವನ್ ಕುಮಾರ್ ತನ್ನ ಕೈಗೆ ಬರೆ ಎಳೆದುಕೊಳ್ಳುವ ಮೂಲಕ ಅಪ್ಪುವಿನ ಹೆಸರು ಬರೆದುಕೊಂಡಿದ್ದಾರೆ. ಬೆಂಕಿಯಲ್ಲಿ ಮೊಳೆ ಕಾಯಿಸಿ ಕೈಯಲ್ಲಿ ಅಪ್ಪು ಎಂದು ಬರೆದುಕೊಂಡಿದ್ದಾರೆ.
ಅಪ್ಪುವಿನ ಕಟ್ಟಾ ಅಭಿಮಾನಿಯಾಗಿದ್ದ ಜೀವನ್ ಕುಮಾರ್, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ನಿಧನದ ಬಗ್ಗೆ ಬರುತ್ತಿರುವ ಸುದ್ದಿಗಳನ್ನು ನೋಡಲು ಸಾಧ್ಯವಾಗದೇ ಸಾಮಾಜಿಕ ಜಾಲತಾಣ ಬಳಸುವುದನ್ನೇ ಬಿಟ್ಟಿದ್ದರಂತೆ. ಇದೀಗ ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಈ ರೀತಿಯಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka