ಮಗನ ಪ್ರೇಯಸಿಯ ಮೇಲೆ ತಂದೆಯಿಂದ ಅತ್ಯಾಚಾರ!
ಚಿಕ್ಕಮಗಳೂರು: ಮಗನ ಪ್ರೇಯಸಿಯ ಮೇಲೆ ತಂದೆಯೇ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ವರದಿಯ ಪ್ರಕಾರ 10ನೇ ತರಗತಿಯ ಅಪ್ರಾಪ್ತ ವಯಸ್ಸಿನ ಸಂತ್ರಸ್ತ ಬಾಲಕಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ತಾಯಿಯ ಮನೆಗೆ ಬಂದಿದ್ದ ಆಕೆ, ಮರುದಿನ ಶಾಲೆ ಮುಗಿಸಿ ಅತ್ತೆಯ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಳು ಎನ್ನಲಾಗಿದೆ.
ಆ ದಿನ ಸಂಜೆ 6 ಗಂಟೆಯಾದರೂ ಬಾಲಕಿ ಮನೆಗೆ ಬಂದಿಲ್ಲ ಎಂದು ಸಂಬಂಧಿಕರು ಬಾಲಕಿಯ ತಾಯಿಗೆ ಫೋನ್ ಮಾಡಿ ತಿಳಿಸಿದ್ದರು. ತಾಯಿ ವಿಚಾರಿಸಿದಾಗ, ಬಾಲಕಿ ಶಾಲೆಗೆ ಹೋಗದೇ, ತಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನ ಮನೆಗೆ ತೆರಳಿರುವುದು ತಿಳಿದು ಬಂದಿದೆ. ತಕ್ಷಣವೇ ಅಲ್ಲಿಗೆ ಹೋದ ತಾಯಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬಾಲಕಿಯನ್ನು ತಾಯಿ ವಿಚಾರಿಸಿದಾಗ, ತಾನು ಪ್ರೀತಿಸುತ್ತಿದ್ದ ಯುವಕನ ಮನೆಗೆ ಹೋದಾಗ ಅಲ್ಲಿ ಆತ ಇರಲಿಲ್ಲ. ಫೋನ್ ಮಾಡಿದರೂ ಸಿಗಲಿಲ್ಲ. ಈ ವೇಳೆ ಆತನ ತಂದೆ, ನೀನು ಇಲ್ಲೇ ಇರು, ನಾಳೆ ಅವನು ಬರುತ್ತಾನೆ ಎಂದು ಬಲವಂತವಾಗಿ ಉಳಿಸಿಕೊಂಡಿದ್ದು, ರಾತ್ರಿ ಊಟದ ಬಳಿಕ ಪ್ರತ್ಯೇಕವಾಗಿ ಮನೆಯಲ್ಲಿ ಮಲಗಿದ್ದೆ. ಈ ವೇಳೆ ಅವರು ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆನ್ನಲಾಗಿದೆ.
ಈ ವೇಳೆ ಬಾಲಕಿಯ ತಾಯಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು:
ಸ್ವಾಮೀಜಿಗಳ ಬರ್ಥ್ ಡೇ ಪ್ರಯುಕ್ತ 150ಕ್ಕೂ ಅಧಿಕ ಗಿಡಗಳಿಗೆ ಡೆತ್ ಡೇ ಭಾಗ್ಯ!
ಪುನೀತ್ ಬದಲು ನನ್ನನ್ನಾದರೂ ಕರೆಯಬಾರದಿತ್ತೇ? | ಪರಮಾತ್ಮ ನೀನು ಹೀಗೆ ಮಾಡಬಾರದಿತ್ತು | ಭಾವುಕರಾದ ಜನಾರ್ದನ ಪೂಜಾರಿ
ಪ್ರೀತಿಗೆ ಜಾತಿ ಅಡ್ಡಿ: ವಿಷ ಸೇವಿಸಿದ ಪ್ರೇಮಿಗಳು | ಪ್ರಿಯಕರ ದಾರುಣ ಸಾವು
“ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ” | ದೆಹಲಿಯಲ್ಲಾದ ಅನುಭವ ಹೇಳಿದ ವೃಕ್ಷಮಾತೆ ತುಳಸಿ ಗೌಡ