ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು - Mahanayaka
1:17 PM Thursday 12 - December 2024

ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು

bus tankare
10/11/2021

ಜೈಪುರ: ಖಾಸಗಿ ಬಸ್ಸೊಂದು ಟ್ಯಾಂಕರ್ ಟ್ರೇಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು, ಪರಿಣಾಮವಾಗಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಾರ್ಮರ್—ಜೋಧ್ ಪುರ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.

ಬಸ್ ಬೆಳಗ್ಗೆ 9:55ಕ್ಕೆ  ಬಲೋತ್ರಾದಿಂದ ಹೊರಟಿತ್ತು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟ್ಯಾಂಕರ್ ಬಸ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಮಾಹಿತಿಗಳ ಪ್ರಕಾರ ಅಪಘಾತ ಸಂಭವಿಸಿದ್ದ ವೇಳೆ 25 ಜನರು ಬಸ್ ನಲ್ಲಿದ್ದರು ಎಂದು ತಿಳಿದು ಬಂದಿದೆ.

ಅಪಘಾತದ ಮಾಹಿತಿ ಪಡೆದು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಸ್ಥಳೀಯ ಶಾಸಕ ಮದನ್ ಪ್ರಜಾಪತ್ ಹಾಗೂ ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಸುಖರಾಮ್ ಬಿಷ್ಣೋಯ್ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾಕಾರ್ಯಾಚರಣೆಗೆ ವ್ಯವಸ್ಥೆ ಕಲ್ಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ:

https://bit.ly/3wyp9Xw

ಇನ್ನಷ್ಟು ಸುದ್ದಿಗಳು

ಬಿಟ್ ಕಾಯಿನ್ ದಂಧೆ ಆರೋಪಿ ಬಿಡುಗಡೆ: ಜಾಮೀನು ಕೊಟ್ಟೋರು ಯಾರು?

ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ಮಾಜಿ ಸಿಂಗಂ ಅಣ್ಣಾಮಲೈಯಿಂದ ರಕ್ಷಣಾ ಕಾರ್ಯ!

ಬಿಟ್ ಕಾಯಿನ್ ಹಗರಣದಲ್ಲಿ ಸಿಎಂ ತಲೆದಂಡ | ಪ್ರಿಯಾಂಕ್ ಖರ್ಗೆ

ಮಗನ ಪ್ರೇಯಸಿಯ ಮೇಲೆ ತಂದೆಯಿಂದ ಅತ್ಯಾಚಾರ!

ಸ್ವಾಮೀಜಿಗಳ ಬರ್ಥ್ ಡೇ ಪ್ರಯುಕ್ತ 150ಕ್ಕೂ ಅಧಿಕ ಗಿಡಗಳಿಗೆ ಡೆತ್ ಡೇ ಭಾಗ್ಯ!

ಪುನೀತ್  ಬದಲು ನನ್ನನ್ನಾದರೂ ಕರೆಯಬಾರದಿತ್ತೇ? | ಪರಮಾತ್ಮ ನೀನು ಹೀಗೆ ಮಾಡಬಾರದಿತ್ತು | ಭಾವುಕರಾದ ಜನಾರ್ದನ ಪೂಜಾರಿ

ಇತ್ತೀಚಿನ ಸುದ್ದಿ