ಮರಿ ಆನೆಗೆ “ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ ಅರಣ್ಯ ಇಲಾಖೆ
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನಿಡಲಾಗಿದ್ದು, ಈ ಮೂಲಕ ಕರುನಾಡಿನ ಪ್ರೀತಿಯ ಅಪ್ಪು ಹೆಸರಿಗೆ ಮರು ಜೀವ ತುಂಬಿ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಿ ಗೌರವ ಸಲ್ಲಿಸಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದಿದ್ದ ನಟ ಪುನೀತ್ ರಾಜ್ ಕುಮಾರ್ ಅವರು ಈ ಆನೆ ಮರಿಯನ್ನು ಮುದ್ದಿಸಿದ್ದರು. ಇದೀಗ ಈ ಆನೆ ಮರಿಗೆ ಪುನೀತ್ ಅವರ ಹೆಸರನ್ನೇ ಇಡಲಾಗಿದೆ. ಈ ಮೂಲಕ ಅರಣ್ಯ ಇಲಾಖೆ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ.
ಈವರೆಗೆ ಆನೆಗಳಿಗೆ ದೇವರ ಹೆಸರು ಹಾಗೂ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ಹೆಸರು ಇಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಚಿತ್ರನಟರೊಬ್ಬರ ಹೆಸರನ್ನು ಆನೆಗೆ ಇಡಲಾಗಿದೆ. ಈ ಮೂಲಕ ಕರ್ನಾಟಕದ ಪ್ರೀತಿಯ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಪರಿಪೂರ್ಣ ಕಲಾವಿದ ಸೃಜನಶೀಲತೆಯ ಮೇರು-ಶಂಕರ್ ನಾಗ್
ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು
ಬಿಟ್ ಕಾಯಿನ್ ದಂಧೆ ಆರೋಪಿ ಬಿಡುಗಡೆ: ಜಾಮೀನು ಕೊಟ್ಟೋರು ಯಾರು?
ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ಮಾಜಿ ಸಿಂಗಂ ಅಣ್ಣಾಮಲೈಯಿಂದ ರಕ್ಷಣಾ ಕಾರ್ಯ!
ಬಿಟ್ ಕಾಯಿನ್ ಹಗರಣದಲ್ಲಿ ಸಿಎಂ ತಲೆದಂಡ | ಪ್ರಿಯಾಂಕ್ ಖರ್ಗೆ
ಸ್ವಾಮೀಜಿಗಳ ಬರ್ಥ್ ಡೇ ಪ್ರಯುಕ್ತ 150ಕ್ಕೂ ಅಧಿಕ ಗಿಡಗಳಿಗೆ ಡೆತ್ ಡೇ ಭಾಗ್ಯ!