ನದಿಗೆ ಇಳಿದು ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ನೀರುಪಾಲು! | ವಿಡಿಯೋ ವೈರಲ್ - Mahanayaka

ನದಿಗೆ ಇಳಿದು ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ನೀರುಪಾಲು! | ವಿಡಿಯೋ ವೈರಲ್

drown water
11/11/2021

ಉಪ್ಪಿನಂಗಡಿ: ಮುಖ ತೊಳೆಯಲೆಂದು ಹೊಳೆಗೆ ಇಳಿದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಯುವಕನೋರ್ವ ಕಣ್ಮರೆಯಾಗಿರುವ ಘಟನೆ ಉಪ್ಪಿನಂಗಡಿಯ ಬರ್ಚಿನಹಳ್ಳ ಎಂಬಲ್ಲಿನ ಗುಂಡ್ಯ ಹೊಳೆಯಲ್ಲಿ ಬುಧವಾರ ನಡೆದಿದೆ.

ರಾಜಸ್ಥಾನ ಮೂಲದ 19 ವರ್ಷ ವಯಸ್ಸಿನ ಸೀತಾರಾಮ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಯುವಕ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ವಾಹನಗಳ ಬಿಡಿಭಾಗಗಳನ್ನು ಮಂಗಳೂರಿನ ಮಾರಾಟ ಮಳಿಗೆಗೆ ವಿತರಿಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಸಂಬಂಧ ಒಂದು ವಿಡಿಯೋ ಕೂಡ ವೈರಲ್ ಆಗಿದೆ. ಬರ್ಚಿನಹಳ್ಳ ಬಳಿಯ ಹೆದ್ದಾರಿ ಬದಿ ಕಾಣುವ ಗುಂಡ್ಯ ಹೊಳೆಯಲ್ಲಿ ಬಂಡೆ ಕಲ್ಲಿನ ಮೇಲೆ ನಿಂತು ಸೀತಾರಾಮ್ ಮುಖ ತೊಳೆಯುತ್ತಿದ್ದ. ಇನ್ನೋರ್ವ ವ್ಯಕ್ತಿ 30 ವರ್ಷ ವಯಸ್ಸಿನ ಧರ್ಮರಾಜ್ ವಿಡಿಯೋ ಮಾಡುತ್ತಿದ್ದರು. ಈ ವೇಳೆ ಬಂಡೆಯ ಮೇಲೆ ಕಾಲು ಜಾರಿ ಸೀತಾರಾಮ್ ನೀರಿಗೆ ಬಿದ್ದು, ಕ್ಷಣ ಮಾತ್ರದಲ್ಲೇ ಕಣ್ಮರೆಯಾಗಿದ್ದಾನೆ.

ಇನ್ನೂ ಘಟನೆಯ ಮಾಹಿತಿ ತಿಳಿದ ಸ್ಥಳಿಯರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದೊಂದಿಗೆ ತೀವ್ರ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗಿಲ್ಲ. ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಇಂದು ಮತ್ತೆ ಯುವಕನಿಗಾಗಿ ಹುಡುಕಾಡ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ದಲಿತ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ, ಇವರೆಲ್ಲ ಗಂಜಿ ಗಿರಾಕಿಗಳು | ಶಿವರಾಜ ತಂಗಡಗಿ ಕಿಡಿ

ನಾನು ಜೀವಂತವಿದ್ದೇನೆ: ತನ್ನ ಹತ್ಯೆಯ ವದಂತಿಯ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

ಮರಿ ಆನೆಗೆ “ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ ಅರಣ್ಯ ಇಲಾಖೆ

ಪರಿಪೂರ್ಣ ಕಲಾವಿದ ಸೃಜನಶೀಲತೆಯ ಮೇರು-ಶಂಕರ್ ನಾಗ್

ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು

ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ಮಾಜಿ ಸಿಂಗಂ ಅಣ್ಣಾಮಲೈಯಿಂದ ರಕ್ಷಣಾ ಕಾರ್ಯ!

ಇತ್ತೀಚಿನ ಸುದ್ದಿ