ನಿರಂತರ ಮಳೆಗೆ ಕುಸಿದು ಬಿದ್ದ ಗೋಡೆ: ಯುವ ದಂಪತಿಯ ದಾರುಣ ಸಾವು
ಚಿತ್ರದುರ್ಗ: ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಪರಿಣಾಮ ಮನೆಯ ಗೋಡೆ ಕುಸಿದು ಬಿದ್ದು ಯುವ ದಂಪತಿ ಮೃತಪಟ್ಟ ಘಟನೆ ಹಿರಿಯೂರಿನ ಕಾರೋಬನಹಟ್ಟಿಯಲ್ಲಿ ನಡೆದಿದ್ದು, ಮಧ್ಯ ವಯಸ್ಕರೊಬ್ಬರು ಗಾಯಗೊಂಡಿದ್ದಾರೆ.
26 ವರ್ಷ ವಯಸ್ಸಿನ ಚೆನ್ನಕೇಶವ ಹಾಗೂ ಅವರ ಪತ್ನಿ 20 ವರ್ಷ ವಯಸ್ಸಿನ ಸೌಮ್ಯ ಮೃತ ದಂಪತಿ ಎಂದು ತಿಳಿದು ಬಂದಿದೆ. ಚೆನ್ನಕೇಶ್ವ ಅವರ ತಂದೆ 55 ವರ್ಷ ವಯಸ್ಸಿನ ಕ್ಯಾತಣ್ಣ ಅವರು ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ನಸುಕಿನ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಐಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಂತಹ ಪ್ರದೇಶಗಳಲ್ಲಿ ದುರ್ಬಲ ಕಟ್ಟಡಗಳು ಉರುಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಆದರೆ, ಹಳ್ಳಿ ಭಾಗಗಳಲ್ಲಿ ಗುಡಿಸಲಿನಲ್ಲಿ ವಾಸವಿರುವವರನ್ನು ಗುರುತಿಸಿ, ಅವರಿಗೆ ಸುರಕ್ಷಿತ ಸೂರು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳಿದ್ದ ಸಂದರ್ಭದಲ್ಲಿಯೂ ಬಡ ಜನರು ತಮ್ಮ ಗುಡಿಸಲು ಕುಸಿದು ಬಿದ್ದ ಸಾವನ್ನಪ್ಪಿರುವಂತಹ ಘಟನೆಗಳು ನಡೆದಿದೆ.
ಸರ್ಕಾರ ಜನರು ಗುಡಿಸಲಿನ ಗೋಡೆಯಡಿಯಲ್ಲಿ ಮಣ್ಣಾಗಿ ಹೋದ ಬಳಿಕ ಪರಿಹಾರ ನೀಡುವುದಕ್ಕಿಂತ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಕುಸಿಯುವ ಹಂತದ ಮನೆಗಳನ್ನು, ಗುಡಿಸಲುಗಳನ್ನು ಸ್ಥಳೀಯಾಡಳಿತದ ಸಹಾಯದೊಂದಿಗೆ ಗುರುತಿಸಿ, ಅವರಿಗೆ ಸುರಕ್ಷಿತ ಸೂರು ಕಲ್ಪಿಸಲು ಮುಂದಾಗಬೇಕಿದೆ ಎನ್ನುವ ಕೂಗು ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ದತ್ತ ಮಾಲಾಧಾರಿಗಳಿದ್ದ ಬಸ್ ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ!
4 ಕೋಟಿಯ ಚಿನ್ನಾಭರಣ ಕಳವು: ಮಗಳ ವಿರುದ್ಧವೇ ದೂರು ನೀಡಿದ ತಾಯಿ!
ಇನ್ನೂ 10 ಮಂದಿಗೆ ದೃಷ್ಟಿ ನೀಡಲಿದೆ ಪುನೀತ್ ರಾಜ್ ಕುಮಾರ್ ಕಣ್ಣುಗಳು!
ಕಡಬ: ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬೆಳೆ ಧ್ವಂಸಗೊಳಿಸಿದ ಕಾಡಾನೆ
ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ ಎಂದು ಸ್ಟೇಟಸ್ ಹಾಕಿ ಕಾಂಗ್ರೆಸ್ ಸದಸ್ಯೆ ಆತ್ಮಹತ್ಯೆಗೆ ಯತ್ನ!
ಆಟೋ ಚಾಲಕನನ್ನು ಶೌಚಾಲಯಕ್ಕೆ ಎಳೆದೊಯ್ದು ವಿವಸ್ತ್ರಗೊಳಿಸಿ ವೈದ್ಯರ ತಂಡದಿಂದ ಹೇಯ ಕೃತ್ಯ!
ಲಖಿಂಪುರ ಖೇರಿ ಹಿಂಸಾಚಾರ ಬಿಜೆಪಿಗೆ ಹಾನಿಯುಂಟು ಮಾಡಬಹುದು | ಸಮೀಕ್ಷೆ
KSRTC ಬಸ್ ನಲ್ಲಿ ಜೋರಾಗಿ ಹಾಡು ಹಾಕಿದರೆ ಶಿಸ್ತು ಕ್ರಮ: ಶಿಕ್ಷೆ ಏನು ಗೊತ್ತಾ?