ಪತ್ನಿಯ ಕಣ್ಣೆದುರೇ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಚ್ಚಿ ಬರ್ಬರ ಹತ್ಯೆ!
ತಿರುವನಂತಪುರಂ: ಆರೆಸ್ಸೆಸ್ ಕಾರ್ಯಕರ್ತನನ್ನು ಪತ್ನಿಯ ಎದುರೇ ಕೊಚ್ಚಿ ಭೀಕರವಾಗಿ ಹತ್ಯೆ ನಡೆಸಿರುವ ಘಟನೆ ಕೇರಳದ ಪಾಲಕ್ಕಾಡ್ ನ ಪಟ್ಟಪ್ಪಕಲ್ ಎಂಬಲ್ಲಿ ನಡೆದಿದ್ದು, ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಈ ಕೃತ್ಯ ನಡೆಸಿದೆ ಎಂದು ತಿಳಿದು ಬಂದಿದೆ.
ಇಲ್ಲಿನ ಎಲಪ್ಪುಳ್ಳಿಯ 27 ವರ್ಷ ವಯಸ್ಸಿನ ಸಂಜಿತ್ ಹತ್ಯೆಗೀಡಾದ ಯುವಕನಾಗಿದ್ದು, ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ಪತ್ನಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ರಸ್ತೆಯಲ್ಲಿ ಅಡ್ಡ ಹಾಕಿ ಪತ್ನಿಯ ಕಣ್ಣೆದುರೇ ಕೊಚ್ಚಿ ಭೀಕರವಾಗಿ ಹತ್ಯೆ ನಡೆಸಿದೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂಜಿತ್ ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಇನ್ನೂ ಈ ಹತ್ಯೆ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದ್ದು, ಈ ಹತ್ಯೆಯನ್ನು ಎಸ್ ಡಿಪಿಐ ಕಾರ್ಯಕರ್ತರು ನಡೆಸಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಕೆರೆಗೆ ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿಯ ದಾರುಣ ಸಾವು!
ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು | ಕ್ಷಮೆಯಾಚಿಸಿದ ಹಂಸಲೇಖ
ಎಚ್ಚರ…! ನೀವು ನಿದ್ದೆ ಕೆಡುತ್ತಿದ್ದೀರಾ? | ಹಾಗಿದ್ದರೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು!
ದಲಿತರ ಮನೆಗೆ ಪೇಜಾವರ ಶ್ರೀ ಬರಬಹುದು ಆದ್ರೆ ಕೋಳಿ ತಿನ್ನಕ್ಕಾಗುತ್ತಾ? | ಹಂಸಲೇಖ ಪ್ರಶ್ನೆಗಳ ಬಾಣ
ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಶಾಲೆಗಳಿಗೆ ರಜೆ
ಹೃದಯ ವಿದ್ರಾವಕ ಘಟನೆ: ಲಾರಿ ಹರಿದು 8 ವರ್ಷ ವಯಸ್ಸಿ ಬಾಲಕಿ ದಾರುಣ ಸಾವು!