ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು! - Mahanayaka
7:22 PM Thursday 12 - December 2024

ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು!

hamsalekha
15/11/2021

  • ವೀರಣ್ಣ ಕೆ.

ಸಂಗೀತ ನಿರ್ದೇಶಕ ಹಂಸಲೇಖ ಅವರು ಅಸಮಾನತೆ ಮತ್ತು ತಾರತಮ್ಯ ಹಾಗೂ ವಾಸ್ತವಗಳ ಬಗ್ಗೆ ಮಾತನಾಡಿರುವುದು ಒಂದು ವಿವಾದವಾಗಿರುವುದು ಒಂದು ಅಚ್ಚರಿಗೆ ಕಾರಣವಾಗಿದೆ. ಇದರಲ್ಲಿ ವಿರೋಧಿಸುವಂತಹದ್ದೇನಿದೆ? ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ನೀಡಬಹುದು. ಆದರೆ, ದಲಿತರ ಆಹಾರ ಪದ್ಧತಿಯಾದ ಮಾಂಸಾಹಾರವನ್ನು ಅವರಿಂದ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರಲ್ಲಿ ತಪ್ಪು ಎಂದೆನಿಸುವ ಅಂಶ ಎಲ್ಲಿದೆ?

ಹಂಸಲೇಖ ಅವರು ಹೇಳಿರುವ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ, ಜಾತಿ ಬೇಧದ ಪರವಾಗಿರುವ ಕೆಲವು ವ್ಯಕ್ತಿಗಳು ಇದನ್ನು ವಿವಾದ ಎಂಬಂತೆ ತೋರಿಸುತ್ತಿದ್ದಾರೆ. ಹಂಸಲೇಖ ಅವರು ಪ್ರಚಾರಕ್ಕಾಗಿ ಈ ಹೇಳಿಕೆ ನೀಡಿದ್ದಾರೆ ಎಂದು ಕೆಲವರು ಜಾತಿ ಬೇಧದ ವಿರುದ್ಧದ ಹಂಸಲೇಖ ಅವರ ಮಾತನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲು ಮುಂದಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರವೇ ಆಗಿದೆ. ಹಂಸಲೇಖ ಎಂದರೆ ಯಾರು ಎನ್ನುವುದು ಈ ರಾಜ್ಯದ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಗೊತ್ತಿದೆ. ಹಾಗೆ ಹೇಳಬೇಕಾದರೆ, ಹಂಸಲೇಖ ಅವರ ವಿರುದ್ಧ ಹೇಳಿಕೆ ನೀಡುತ್ತಿರುವವರು ಯಾರೆಂದು ಗೊತ್ತಿಲ್ಲದ ಜನರು ಈ ರಾಜ್ಯದಲ್ಲಿ ಬಹಳಷ್ಟಿದ್ದಾರೆ.

ಯಾರು ಜಾತಿ ವ್ಯವಸ್ಥೆ ವಿರುದ್ಧವಾಗಿ ಮಾತನಾಡುತ್ತಾರೋ ಅವರನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಲೇ ಬರುತ್ತಿದೆ. ಇಂದು ಹಂಸಲೇಖ ಅವರನ್ನು ಕೂಡ ಮೊಳಕೆಯಲ್ಲಿ ಚಿವುಟಿ ಹಾಕಲಾಗಿದೆ. ಆದರೂ, ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ನಾನೂ ಭಾಗಿ ಎಂದು ಹಂಸಲೇಖ ಅವರು ಹೇಳಿರುವುದು ಅವರ ಮಾತಿನಲ್ಲಿ ಅವರಿಗಿರುವ ಬದ್ಧತೆಯನ್ನು ತೋರಿದೆ.

“ಬ್ರಾಹ್ಮಣ ಹೆಣ್ಣು ಮಕ್ಕಳು ಬೇರೆ ಜಾತಿಯ ಹಿಂದೂ ಯುವಕರನ್ನು ಮದುವೆಯಾಗಬಾರದು” ಎಂದು ಸ್ವಾಮೀಜಿಯೊಬ್ಬರು ನೀಡಿದ ಹೇಳಿಕೆ ಇಲ್ಲಿ ವಿವಾದವಾಗಲಿಲ್ಲ. ಪ್ರತಿಭಟನೆ ಮಾಡಿದ ದಲಿತರನ್ನು ನಾಯಿಗೆ ಹೋಲಿಸಿದ್ದು, ವಿವಾದವಾಗಿ ಕಾಣಲಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕೆ 2 ವರ್ಷದ ದಲಿತ ಮಗುವಿಗೆ ದಂಡ ಹಾಕಿದ್ದು ವಿವಾದವಾಗಿ ಕಾಣಲಿಲ್ಲ. ಆದರೆ, ಜಾತಿ ಬೇಧದ ವಿರುದ್ಧವಾಗಿ ಚಿಂತಿಸುವಂತಹ ಒಂದು ಹೇಳಿಕೆಯನ್ನು ಹಂಸಲೇಖ ಅವರು ಹೇಳಿದಾಗ ಅದು ವಿವಾದವಾಗಿ ಕಾಣಿಸಿತು. ಪ್ರಚಾರ ಪಡೆದುಕೊಳ್ಳುವಂತೆ ಕಾಣಿಸಿತು. ಈ ನಡುವೆ ಹಂಸಲೇಖ ಪರವಾಗಿ ಮಾತನಾಡಲೂ ಹಿಂದೆ ಮುಂದೆ ನೋಡುತ್ತಿರುವ ದಲಿತ ಸಂಘಟನೆಗಳ ಪುಕ್ಕಲು ತನ ನೋಡಿ ನಿಜಕ್ಕೂ ನಾಚಿಕೆಯಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಪತ್ನಿಯ ಕಣ್ಣೆದುರೇ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಚ್ಚಿ ಬರ್ಬರ ಹತ್ಯೆ!

ಕೆರೆಗೆ ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿಯ ದಾರುಣ ಸಾವು!

ಎಚ್ಚರ…! ನೀವು ನಿದ್ದೆ ಕೆಡುತ್ತಿದ್ದೀರಾ? | ಹಾಗಿದ್ದರೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು!

ದಲಿತರ ಮನೆಗೆ ಪೇಜಾವರ ಶ್ರೀ ಬರಬಹುದು ಆದ್ರೆ ಕೋಳಿ ತಿನ್ನಕ್ಕಾಗುತ್ತಾ? | ಹಂಸಲೇಖ ಪ್ರಶ್ನೆಗಳ ಬಾಣ

ದೇವರ ಪ್ರಸಾದ ಸೇವಿಸಿ ವಾಂತಿ ಭೇದಿ | 25ರಿಂದ 30 ಭಕ್ತರು ಅಸ್ವಸ್ಥ

ಹೃದಯ ವಿದ್ರಾವಕ ಘಟನೆ: ಲಾರಿ ಹರಿದು 8 ವರ್ಷ ವಯಸ್ಸಿ ಬಾಲಕಿ ದಾರುಣ ಸಾವು!

ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರ ದಾರುಣ ಸಾವು!

ಇತ್ತೀಚಿನ ಸುದ್ದಿ