ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ದಂಪತಿಯ ದಾರುಣ ಸಾವು

ಉತ್ತರ ಕನ್ನಡ: ಕಾರೊಂದು ಇಲ್ಲಿನ ಅಮ್ಮಾಜಿ ಕೆರೆಗೆ ಬಿದ್ದು ಮುಳುಗಡೆಯಾಗಿದ್ದು, ಪರಿಣಾಮವಾಗಿ ದಂಪತಿಗಳಿಬ್ಬರು ದಾರುಣವಾಗಿ ಸಾವಪ್ಪಿದ ಘಟನೆ ಮಂಡಗೋಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಯಲ್ಲಾಪುರದಿಂದ ಬಂದು ಕಲಘಟಗಿ ರಸ್ತೆಯತ್ತ ತಿರುಗಿಕೊಳ್ಳುತ್ತಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸೆಲೆರಿಯೋ ಕಾರು ಕೆರೆಗೆ ಬಿದ್ದಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಕಾರಿನಲ್ಲಿ ಮೃತಪಟ್ಟವರನ್ನು ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ.
ಇನ್ನೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು!
ಪತ್ನಿಯ ಕಣ್ಣೆದುರೇ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಚ್ಚಿ ಬರ್ಬರ ಹತ್ಯೆ!
ಕೆರೆಗೆ ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿಯ ದಾರುಣ ಸಾವು!
ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು | ಕ್ಷಮೆಯಾಚಿಸಿದ ಹಂಸಲೇಖ
ಎಚ್ಚರ…! ನೀವು ನಿದ್ದೆ ಕೆಡುತ್ತಿದ್ದೀರಾ? | ಹಾಗಿದ್ದರೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು!
ದಲಿತರ ಮನೆಗೆ ಪೇಜಾವರ ಶ್ರೀ ಬರಬಹುದು ಆದ್ರೆ ಕೋಳಿ ತಿನ್ನಕ್ಕಾಗುತ್ತಾ? | ಹಂಸಲೇಖ ಪ್ರಶ್ನೆಗಳ ಬಾಣ