50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ, 5 ಲಕ್ಷ ಪರಿಹಾರ ನೀಡುತ್ತೇವೆ | ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: 50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ. ಚಿಕ್ಕಂದಿನಿಂದಲೂ ಇಂಥ ಮಳೆ ನೀರು ಹರಿಯುವುದನ್ನು ನೋಡಿಯೆ ಇಲ್ಲ. ಒಂದೆಡೆ ಸಂತಸವಾದ್ರೆ ಮತ್ತೊಂದೆಡೆ ಅನಾನುಕೂಲವಾಗಿ, ಜನ ಪರಿತಪಿಸುವತಾಗಿದೆ ಎಂದು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 436 ಮನೆಗಳು ನೆಲಸಮವಾಗಿದೆ. ಬಿದ್ದ ಮನೆ ದುರಸ್ತಿಗೆ ರೂ.5 ಲಕ್ಷ ಪರಿಹಾರ ನೀಡುತ್ತೇವೆ, ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಕಾಳಜಿ ಕೇಂದ್ರ ತೆರೆದಿದ್ದೇವೆ. ಇನ್ನೂ 2-3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ನೀರು ಹರಿಯುವ ಕಡೆ ಹೋಗಬೇಡಿ ಎಂದು ಕಟ್ಟೆಚ್ಚರದ ಮನವಿ ಮಾಡಿಕೊಂಡ ಸಚಿವ ಸುಧಾಕರ್, ಜಿಲ್ಲೆಯಲ್ಲಿ ಈಗಾಗಲೇ 3 ಜನ ಕೊಚ್ಚಿಹೋಗಿದ್ದಾರೆ. ಸೇತುವೆಗಳ ಮೇಲೆ ಯಾರೂ ಹೋಗಬೇಡಿ ಎಂದು ಸಚಿವರು ಇದೇ ವೇಳೆ ಜನರಿಗೆ ಸಲಹೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಪಾಯದ ಮಟ್ಟ ಮೀರಿ ಉಕ್ಕಿ ಹರಿದ ಪಂಬಾ ನದಿ: ಶಬರಿಮಲೆ ಯಾತ್ರೆ ನಿಷೇಧ
“ಕೃಷಿ ಕಾಯ್ದೆ ರದ್ದು ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ” | ನಿಜವಾಯ್ತು ರಾಹುಲ್ ಗಾಂಧಿ ಹೇಳಿಕೆ
ಶ್ರೀಕೃಷ್ಣ ಪರಮಾತ್ಮನ ಕೈ ತುಂಡಾಯಿತು ಎಂದು ವಿಗ್ರಹವನ್ನು ಆಸ್ಪತ್ರೆಗೆ ದಾಖಲಿಸಿದ ಅರ್ಚಕ
ಪ್ರವಾಹಕ್ಕೆ ನಲುಗಿದ ಆಂಧ್ರಪ್ರದೇಶ: 17 ಮಂದಿ ಸಾವು, 100ಕ್ಕೂ ಅಧಿಕ ಮಂದಿ ನಾಪತ್ತೆ
ಮಂಗಳೂರು: 1.92 ಕೋ.ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ
ಕೃಷಿ ಕಾಯ್ದೆ ವಾಪಸ್ | ಪತ್ರಕರ್ತರ ಪ್ರಶ್ನೆಗೆ ನಿರುತ್ತರವಾಗಿ ಮುಂದೆ ನಡೆದ ಸಚಿವೆ ಶೋಭಾ ಕರಂದ್ಲಾಜೆ