ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಮಹಿಳೆ - Mahanayaka
3:08 AM Wednesday 11 - December 2024

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಮಹಿಳೆ

sheeba
21/11/2021

ಡಿಮಾಳಿ: ಪ್ರೀತಿಯನ್ನು ನಿರಾಕರಿಸಿದಕ್ಕೆ ವಿವಾಹಿತ ಮಹಿಳೆಯೊಬ್ಬರು ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ಕೇರಳದಲ್ಲಿ ನಡೆದಿದ್ದು, ಆ್ಯಸಿಡ್ ದಾಳಿಯ ವೇಳೆ ಮಹಿಳೆಯ ಮುಖ ಹಾಗೂ ದೇಹಕ್ಕೂ ಆ್ಯಸಿಡ್ ಬಿದ್ದಿದೆ.

ಕೇರಳದಲ್ಲಿ ಇದೊಂದು ಅಪರೂಪದ ಅಪರಾಧ ಘಟನೆಯಾಗಿದ್ದು, ಪ್ರೀತಿಯನ್ನು ನಿರಾಕರಿಸಿದ ಪ್ರಿಯಕರನಿಗೆ ಆ್ಯಸಿಡ್ ಎರಚಿರುವ ಪ್ರಕರಣ ಇದೇ ಮೊದಲಿಗೆ ವರದಿಯಾಗಿದೆ. ಶೀಬಾ ಎಂಬ ಮಹಿಳೆ ಆ್ಯಸಿಡ್ ಎರಚಿದ ಮಹಿಳೆಯಾಗಿದ್ದು, ಅರುಣ್ ಎಂಬ ಯುವಕ ಆ್ಯಸಿಡ್ ದಾಳಿಗೊಳಗಾದ ಯುವಕನಾಗಿದ್ದಾನೆ.

ಇಲ್ಲಿನ ಚರ್ಚ್ ಆವರಣದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಶೀಬಾ ಹಾಗೂ ಅರುಣ್ ಚರ್ಚ್ ಆವರಣದಲ್ಲಿ  ನಿಂತು ಕೊಂಡಿದ್ದು, ಅರುಣ್ ಶೀಬಾಗೆ ತಿರುಗಿ ನಿಂತುಕೊಂಡಿದ್ದ. ಈ ವೇಳೆ ಏಕಾಏಕಿ ಓಡಿ ಬಂದ ಶೀಬಾ ಅರುಣ್ ನ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ. ಈ ವೇಳೆ, ಆಕೆಯ ಮುಖಕ್ಕೆ ಕೂಡ ಆ್ಯಸಿಡ್ ತಗಲಿದೆ.

ಆಸಿಡ್ ನಿಂದ ತೀವ್ರವಾಗಿ ಗಾಯಗೊಂಡ ಅರುಣ್ ಸ್ಥಳದಲ್ಲಿಯೇ ಬಿದ್ದು ನರಳಾಡುತ್ತಿದ್ದರೆ, ಇತ್ತ ಶೀಬಾ ಸ್ಥಳದಿಂದ ಪರಾರಿಯಾಗಿದ್ದಾಳೆ ಬಳಿಕ ತನ್ನ ಪತಿಯ ಮನೆಗೆ ತೆರಳಿದ್ದಾಳೆ. ಮುಖಕ್ಕೆ ಏನು ಗಾಯವಾಗಿದೆ ಎಂದು ಪತಿ ಪ್ರಶ್ನಿಸಿದಾಗ ಗಂಜಿ ನೀರು ಮುಖಕ್ಕೆ ಬಿದ್ದಿದೆ ಎಂದು ಸುಳ್ಳು ಹೇಳಿದ್ದಳು.

ಇತ್ತ ಆ್ಯಸಿಡ್ ದಾಳಿಯಿಂದ ಗಾಯಗೊಂಡಿದ್ದ ಅರುಣ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರುಣ್ ನ ಎರಡು ಕಣ್ಣುಗಳೂ ಸುಟ್ಟು ಹೋಗಿವೆ. ಇನ್ನೂ ಅರುಣ್ ಚೇತರಿಸಿಕೊಂಡ ಬಳಿಕ ಘಟನೆಯನ್ನು ವಿವರಿಸಿ, ಪೊಲೀಸರಿಗೆ ದೂರು ನೀಡಿದ್ದು, ಆದಿಮಲಿ ಪೊಲೀಸರು ತಿರುವನಂತಪುರಂಗೆ ಆಗಮಿಸಿ ಅರುಣ್ ಹೇಲಿಕೆ ದಾಖಲಿಸಿಕೊಂಡಿದ್ದು, ಚರ್ಚ್ ನಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಗಂಡನ ಮನೆಯಲ್ಲಿದ್ದ ಶೀಬಾಳನ್ನು ಪೊಲೀಸರು ಬಂಧಿಸಿದ್ದಾರೆ.

ಅರುಣ್ ಹಾಗೂ ಶೀಬಾಗೆ ಫೇಸ್ ಬುಕ್ ನಲ್ಲಿ ಪ್ರೀತಿಯಾಗಿತ್ತು. ಆದರೆ, ಶೀಬಾಗೆ ವಿವಾಹವಾಗಿದೆ ಎನ್ನುವುದು ಅರುಣ್ ಗೆ ತಿಳಿದ ಬಳಿಕ ಆತ ಆಕೆಯಿಂದ ದೂರವಾಗಲು ಯತ್ನಿಸಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಬಾ ತೀವ್ರವಾಗಿ ಕೋಪಗೊಂಡಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ಈ ಕೃತ್ಯ ನಡೆಸಿದ್ದಾಳೆ ಎನ್ನಲಾಗಿದೆ. ಅಂದ ಹಾಗೆ ಶೀಬಾಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಪೊಲೀಸರು ಮನೆಗೆ ಬಂದು ಶೀಬಾಳನ್ನು ಬಂಧಿಸುವವರೆಗೂ ಶೀಬಾ ನಡೆಸಿದ ಕಿತಾಪತಿಗಳ್ಯಾವುದೂ ಆಕೆಯ ಪತಿಗೆ ತಿಳಿದಿರಲಿಲ್ಲ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೋಲಾರ ಎಪಿಎಂಸಿಯಲ್ಲಿ 1 ಕೆ.ಜಿ.ಗೆ 125 ರೂ.ಗೆ ಮಾರಾಟವಾದ ಟೊಮೆಟೋ

ಹಿಂದೂ ಯುವತಿ, ಮುಸ್ಲಿಮ್ ಯುವಕನ ವಿವಾಹ ಫಿಕ್ಸ್: ಸ್ವಾಮೀಜಿಯಿಂದ ಸಂಧಾನಕ್ಕೆ ಯತ್ನ

ಕಿತ್ತಲೆ ಮಾರುವಾಗ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಶಾಲೆ ನಿರ್ಮಿಸಬೇಕು ಅನ್ನಿಸಿತು: ಹರೇಹಳ ಹಾಜಬ್ಬ

50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ, 5 ಲಕ್ಷ ಪರಿಹಾರ ನೀಡುತ್ತೇವೆ | ಸಚಿವ ಡಾ.ಕೆ.ಸುಧಾಕರ್

ಮಳೆ ಅನಾಹುತ: ಬಹುಮಹಡಿ ಕಟ್ಟಡದ ಗೋಡೆ ಕುಸಿದು 9 ಮಂದಿಯ ದಾರುಣ ಸಾವು

ಶ್ರೀಕೃಷ್ಣ ಪರಮಾತ್ಮನ ಕೈ ತುಂಡಾಯಿತು ಎಂದು ವಿಗ್ರಹವನ್ನು ಆಸ್ಪತ್ರೆಗೆ ದಾಖಲಿಸಿದ ಅರ್ಚಕ

ಇತ್ತೀಚಿನ ಸುದ್ದಿ