ಹುಟ್ಟುವಾಗಲೇ ಆತ ಕಾಲು ಕಳೆದುಕೊಂಡಿದ್ದ | ಆದರೆ ಆತ ಇಷ್ಟಪಟ್ಟಿದ್ದು ಫುಟ್ಬಾಲ್!
ಮಣಿಪುರ: ಹುಟ್ಟುವಾಗಲೇ ಒಂದು ಕಾಲು ಇಲ್ಲದೆ ಜನಿಸಿದ ಅವನಿಗೆ ಇಷ್ಟವಾಗಿದ್ದು ಫುಟ್ಬಾಲ್. ಕಾಲುಗಳನ್ನೇ ಬಳಸಿ ಆಡುವ ಫುಟ್ ಬಾಲ್ ನ್ನು ಕಾಲಿಲ್ಲದ ಆತ ಆಡಬಲ್ಲನೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಾಗಲೇ ಆತನ ಪ್ರಯತ್ನಗಳು ಆರಂಭವಾಗಿದ್ದವು. ಒಂದು ಕೈನಲ್ಲಿ ಹ್ಯಾಂಡ್ ಸ್ಟಿಕ್, ಹಿಡಿದುಕೊಂಡು ಒಂದೇ ಕಾಲಿನಿಂದ ಆ ಹುಡುಗ ತನ್ನ ಗೆಳೆಯರೊಂದಿಗೆ ಫುಟ್ಬಾಲ್ ಆಡಲು ಆರಂಭಿಸಿದ್ದಾನೆ.
ಹೌದು..! ಆತನ ಹೆಸರು ಕುನಾಲ್ ಶ್ರೇಷ್ಠಾ, ಮಣಿಪುರದ ಇಂಫಾಲ್ ಮೂಲದ ಈ ಹುಡುಗ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಹುಟ್ಟುವ ಸಂದರ್ಭದಲ್ಲಿಯೇ ಒಂದು ಕಾಲನ್ನು ಮಾತ್ರವೇ ಈತ ಹೊಂದಿದ್ದ. ಆದರೆ, ಈತ ಬೆಳೆಯುತ್ತಿದ್ದಂತೆಯೇ ಫುಟ್ಬಾಲ್ ನಲ್ಲಿ ಆಸಕ್ತಿ ವಹಿಸಿಕೊಂಡನು. ಈ ಸಂದರ್ಭದಲ್ಲಿ ಮೊದಲು ಬ್ಯಾಲೆನ್ಸ್ ಮಾಡಿಕೊಳ್ಳಲು ಬಹಳ ಕಷ್ಟಪಟ್ಟ. ಆ ಬಳಿಕ ಈಗ ಆತ ಯಶಸ್ವಿಯಾಗಿ ಆಡಲು ಆರಂಭಿಸಿದ್ದಾನೆ. ಈತ ಫುಟ್ಬಾಲ್ ಆಡುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
I love playing football. Initially, I faced problems in balancing, I was scared but now I have gained confidence. My friends support me a lot. I hope I will score a goal soon: Kunal Shrestha from Imphal, Manipur. https://t.co/PoQ0HIbBP3 pic.twitter.com/JSQP28MQBR
— ANI (@ANI) November 10, 2020
ನನ್ನ ಮಗ ಕಾಲು ಇಲ್ಲದೆಯೇ ಜನಿಸಿದ. ಆದರೆ, ಆತ ತನ್ನ ಗೆಳೆಯರಿಗಿಂತ ಭಿನ್ನವಾಗಿರಲು ನಾನು ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಅವರು ಕೂಡ ಎಂದಿಗೂ ಅವನನ್ನು ಅವಮಾನಿಸದೇ ತಮ್ಮ ಸಮಾನಾಗಿ ನೋಡಿದ್ದಾರೆ. ಈಗ ಆತ ಬೈಸಿಕಲ್ ಸವಾರಿ ಮಾಡುತ್ತಾನೆ. ಫುಟ್ವಾಲ್ ಆಡುತ್ತಾನೆ ಎಂದು ಎಎನ್ ಐ ಸುದ್ದಿ ಸಂಸ್ಥೆಯ ಜೊತೆಗೆ ಕುನಾಲ್ ತಾಯಿ ಎಎನ್ ಐಗೆ ತಿಳಿಸಿದರು.
ಇನ್ನೂ ತನ್ನ ಕೊರತೆಗಳನ್ನು ಲೆಕ್ಕಿಸದೆಯೇ ಗೆಳೆಯರ ಜೊತೆಗೆ ಆಡುತ್ತಿರುವ ಕುನಾಲ್, ನಾನು ಈಗ ಆಡುತ್ತಿದ್ದೇನೆ. ಸದ್ಯದಲ್ಲಿಯೇ ನಾನು ಗೋಲುಬಾರಿಸುತ್ತೇನೆ ಎಂದು ದೃಢ ನಿಶ್ಚಯದೊಂದಿಗೆ ಹೇಳುತ್ತಿದ್ದಾನೆ. ಈ ಹುಡುಗನ ಸಾಧನೆ ಗಮನಿಸಿದರೆ, ಈತ ಖಂಡಿತವಾಗಿಯೂ ಏನಾದರೂ ಸಾಧನೆ ಮಾಡುತ್ತಾನೆ ಎಂದು ಜನ ಈಗಲೇ ಹೇಳಲು ಆರಂಭಿಸಿದ್ದಾರೆ.