ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಾಗ ಎಲ್ಲಿ ಹೋಗಿತ್ತು ಕರ್ತವ್ಯ ನಿಷ್ಠೆ? | ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ - Mahanayaka
11:05 PM Wednesday 11 - December 2024

ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಾಗ ಎಲ್ಲಿ ಹೋಗಿತ್ತು ಕರ್ತವ್ಯ ನಿಷ್ಠೆ? | ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

bjp
22/11/2021

ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ನಡೆಸಲು ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ಕರ್ತವ್ಯದ ಪಾಠ ಬೇಡ ಎಂದು ಹೇಳಿರುವ ಬಿಜೆಪಿ, ಸರ್ಕಾರಕ್ಕೆ ಕರ್ತವ್ಯದ ಪಾಠ ಮಾಡುತ್ತಿರುವ ನೀವು ಏನು ಮಾಡಿದ್ದೀರಿ ಎನ್ನುವುದನ್ನು ನೋಡಿ, ನಿಮ್ಮ ಕರ್ತವ್ಯ ನಿಷ್ಠೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ,  ಸರ್ಕಾರಕ್ಕೆ ಕರ್ತವ್ಯದ ಪಾಠ ಮಾಡುತ್ತಿರುವ ಸಿದ್ದರಾಮಯ್ಯ ಅವರು ಮಾಡಿದ್ದೇನು? ನೆರೆ ಪೀಡಿತವಾಗಿದ್ದ ಬಾದಾಮಿ ಮತಕ್ಷೇತ್ರಕ್ಕೆ ತೆರಳಲು ಕಣ್ಣು ನೋವಿನ ಕಾರಣ ಹೇಳಿದ್ದ ಸಿದ್ದರಾಮಯ್ಯ, ಅದೇ ವೇಳೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಿದ್ದರು. ಆಗ ಎಲ್ಲಿ ಹೋಗಿತ್ತು ನಿಮ್ಮ ಕರ್ತವ್ಯ ನಿಷ್ಠೆ? ಎಂದು ಪ್ರಶ್ನಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೋದಿಜಿ ಬಾಲಿವುಡ್ ನಲ್ಲಿರುತ್ತಿದ್ದರೆ, ಎಲ್ಲ ಪ್ರಶಸ್ತಿ ಅವರೇ ಗೆಲ್ಲುತ್ತಿದ್ದರು | ಅಸಾದುದ್ದೀನ್ ಓವೈಸಿ ವ್ಯಂಗ್ಯ

ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು

ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು

ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು

ಕ್ಷಮೆ ಕೇಳದಿದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೆಯುತ್ತೇವೆ | ಸ್ವಾಮೀಜಿ ಎಚ್ಚರಿಕೆ

ಆಂಧ್ರಪ್ರದೇಶ:  ಪ್ರವಾಹದ ಪರಿಣಾಮ 25 ಮಂದಿ ಸಾವು, 17ಕ್ಕೂ ಅಧಿಕ ಮಂದಿ ನಾಪತ್ತೆ 20 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರ

ಇತ್ತೀಚಿನ ಸುದ್ದಿ