ಪ್ರಾರ್ಥನೆ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಚರ್ಚ್ ಧರ್ಮಗುರು ನಿಧನ - Mahanayaka
1:06 AM Wednesday 11 - December 2024

ಪ್ರಾರ್ಥನೆ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಚರ್ಚ್ ಧರ್ಮಗುರು ನಿಧನ

father luis
22/11/2021

ಮಂಗಳೂರು: ಪ್ರಾರ್ಥನೆ ಮಾಡುತ್ತಿದ್ದ ವೇಳೆ ಚರ್ಚ್ ನ ಧರ್ಮಗುರುವೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ಕಾಟಿಪಳ್ಳ ಇನ್ಫೆಂಟ್ ಮೇರಿ ಚರ್ಚ್ ನಲ್ಲಿ ನಡೆದಿದೆ.

ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಫಾ.ವಲೇರಿಯನ್ ಲೂವಿಸ್ ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು  ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಫಾ.ಲೂವಿಸ್ ಅವರು 1995ರಲ್ಲಿ ಮಂಗಳೂರು ಧರ್ಮಪ್ರಾಂತ್ಯದಿಂದ ಧರ್ಮಗುರುಗಳಾಗಿ ನೇಮಕ ಗೊಂಡರು. ವಾಮಂಜೂರು, ಬಾರ್ಕೂರು ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ಅವರು, ಜೆಪ್ಪುವಿನಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.

ಕೊಕ್ಕಡ, ಸುಳ್ಯ ಮತ್ತು ಮಂಜೇಶ್ವರ ಚರ್ಚ್ ಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಫಾ.ಲೂವಿಸ್, 2019ರಲ್ಲಿ ಕಾಟಿಪಳ್ಳ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಆರಂಭಿಸಿದ್ದರು. ಫಾ.ಲೂವಿಸ್ ಅವರು ಪುತ್ತೂರು ಮೂಲದವರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹರಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ!

ಶವಾಗಾರದ ಫ್ರೀಜರ್ ನಿಂದ ಹೊರ ತೆಗೆದಾಗ ಸತ್ತ ವ್ಯಕ್ತಿ ಜೀವಂತ!

ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಾಗ ಎಲ್ಲಿ ಹೋಗಿತ್ತು ಕರ್ತವ್ಯ ನಿಷ್ಠೆ? | ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಮೋದಿಜಿ ಬಾಲಿವುಡ್ ನಲ್ಲಿರುತ್ತಿದ್ದರೆ, ಎಲ್ಲ ಪ್ರಶಸ್ತಿ ಅವರೇ ಗೆಲ್ಲುತ್ತಿದ್ದರು | ಅಸಾದುದ್ದೀನ್ ಓವೈಸಿ ವ್ಯಂಗ್ಯ

ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು

ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು

ಇತ್ತೀಚಿನ ಸುದ್ದಿ