ಬಿಜೆಪಿಗೆ ಮಳೆ ನಿಲ್ಲಿಸೋಕೆ ಬರುತ್ತಾ? | ಸಚಿವ ಈಶ್ವರಪ್ಪ ಬೇಜವಾಬ್ದಾರಿಯ ಹೇಳಿಕೆ! - Mahanayaka
1:04 AM Wednesday 11 - December 2024

ಬಿಜೆಪಿಗೆ ಮಳೆ ನಿಲ್ಲಿಸೋಕೆ ಬರುತ್ತಾ? | ಸಚಿವ ಈಶ್ವರಪ್ಪ ಬೇಜವಾಬ್ದಾರಿಯ ಹೇಳಿಕೆ!

k s eshwarappa
22/11/2021

ಮಡಿಕೇರಿ: ರಾಜ್ಯದಲ್ಲಿ ಪ್ರವಾಹ ಬಂದರೂ ಶಾಸಕರು ಕ್ಷೇತ್ರಗಳಿಗೆ ಹೋಗುತ್ತಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಸಚಿವ ಕೆ.ಎಸ್.ಈಶ್ವರಪ್ಪನವರು ಬೇಜವಾಬ್ದಾರಿಯ ಹೇಳಿಕೆ ನೀಡಿದ ಘಟನೆ ನಡೆದಿದೆ.

ಪ್ರತಿ ಪಕ್ಷಗಳ ಹೇಳಿಕೆಯ ಸಂಬಂಧ ಮಡಿಕೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ನಿಲ್ಲಿಸೋಕೆ ಬಿಜೆಪಿಗೆ ಬರುತ್ತಾ? ಇದನ್ನು ರಾಜಕೀಯಕ್ಕೆ ತರುವುದಕ್ಕೆ ಬರುತ್ತಾ? ಎಂದು ಪ್ರಶ್ನಿಸಿದರು ಎಂದು ವರದಿಯಾಗಿದೆ.

ಈಗಾಗಲೇ ನಮ್ಮ ಸಚಿವರು, ಶಾಸಕರು ಮಳೆ ಹಾನಿ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ. ಇದಲ್ಲದೇ ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಕಾಂಗ್ರೆಸ್ ನವರು ಸುಮ್ಮನೆ ಟೀಕಿಸುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಾರ್ಥನೆ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಚರ್ಚ್ ಧರ್ಮಗುರು ನಿಧನ

ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹರಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ!

ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಾಗ ಎಲ್ಲಿ ಹೋಗಿತ್ತು ಕರ್ತವ್ಯ ನಿಷ್ಠೆ? | ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಮೋದಿಜಿ ಬಾಲಿವುಡ್ ನಲ್ಲಿರುತ್ತಿದ್ದರೆ, ಎಲ್ಲ ಪ್ರಶಸ್ತಿ ಅವರೇ ಗೆಲ್ಲುತ್ತಿದ್ದರು | ಅಸಾದುದ್ದೀನ್ ಓವೈಸಿ ವ್ಯಂಗ್ಯ

ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು

ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು

ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು

ಇತ್ತೀಚಿನ ಸುದ್ದಿ