ಕೇರಳದಲ್ಲಿ ಬಿಜೆಪಿ ತಳವೂರಲು ಅವಕಾಶ ಕೊಡುವುದಿಲ್ಲ | ಶೈಲಜಾ ಟೀಚರ್ - Mahanayaka
8:43 AM Wednesday 11 - December 2024

ಕೇರಳದಲ್ಲಿ ಬಿಜೆಪಿ ತಳವೂರಲು ಅವಕಾಶ ಕೊಡುವುದಿಲ್ಲ | ಶೈಲಜಾ ಟೀಚರ್

shailaja
24/11/2021

ಮಂಗಳೂರು:  ಭಕ್ತಿಯ ಹೆಸರಿನಲ್ಲಿ ಜನರನ್ನು ವಂಚಿಸಿ ಅಧಿಕಾರಕ್ಕೆ ಏರುವ ಬಿಜೆಪಿಯನ್ನು ಕೇರಳದಲ್ಲಿ ತಳವೂರಲು  ಸಿಪಿಎಂ ಅವಕಾಶ ಕೊಡುವುದಿಲ್ಲ ಎಂದು  ಕೇರಳದ ಮಾಜಿ ಸಚಿವೆ, ಹಾಲಿ ಶಾಸಕಿ ಶೈಲಜಾ ಟೀಚರ್ ಹೇಳಿದರು.

ಮಂಗಳವಾರ ದ.ಕ. ಜಿಲ್ಲಾ 23ನೇ ಸಮ್ಮೇಳನದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಹೆಸರಿಗೆ ಮಾತ್ರವೇ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಆದರೆ, ಆಡಳಿತ ನಡೆಸುವುದು ಸಂಘಪರಿವಾರವಾಗಿದೆ ಎಂದು ಅವರು ಆರೋಪಿಸಿದರು.

ದೇಶದಲ್ಲಿರುವುದು ಕಾರ್ಪೊರೇಟ್ ಕಂಪೆನಿಗಳ ಸರ್ಕಾರವಾಗಿದೆ. ಅದರ ವಿರುದ್ಧ ಹೋರಾಟ ಪ್ರಾರಂಭವಾಗಿದೆ. ರೈತರ ಹೋರಾಟ ಕೇವಲ ಪ್ರಧಾನಿ ಮೋದಿಯ ವಿರುದ್ಧವಲ್ಲ, ಕಾರ್ಪೊರೇಟ್ ಕಂಪೆನಿಗಳ ವಿರುದ್ಧವೂ ಆಗಿದೆ ಎಂದು ಶೈಲಜಾ ಟೀಚರ್ ಹೇಳಿದರು.

ಈ ದೇಶದಲ್ಲಿ ಕೇವಲ ಹಿಂದೂಗಳು ಮಾತ್ರವೇ ಇರಬೇಕು ಎಂದು ಮೋದಿ, ಅಮಿತ್ ಶಾ, ಸಂಘಪರಿವಾರದವರು ಹೇಳುತ್ತಾರೆ. ಆದರೆ, ಹಿಂದೂ ಹೆಸರಿನಲ್ಲಿ ಮೇಲ್ಜಾತಿಯವರು ಅಭಿವೃದ್ಧಿ ಹೊಂದಿದರೆ, ಇತರರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬಿಜೆಪಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ ಎಂದು ಅವರು ಹೇಳಿದರು.

ಪಕ್ಷದ ಮುಖಂಡ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಕ್ಷದ ಮುಖಂಡರಾದ ಕೆ.ಎಸ್.ಶ್ರೀಯಾನ್, ಯು.ಬಿ.ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಾಸುದೇ ಉಚ್ಚಿಲ್, ಮನೋಜ್ ವಾಮಂಜೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟೋ ತಡೆದು ಸಹೋದರರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬಡ ಹೆಣ್ಣು ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ: ಮೌನಕ್ಕೆ ಶರಣಾದ ಮಂಗಳೂರಿನ ಸಂಘಟನೆಗಳು

ಪೊಲೀಸ್ ಠಾಣೆಯಿಂದ ಮನೆಗೆ ಬಂದ ಯುವತಿ ಆತ್ಮಹತ್ಯೆಗೆ ಶರಣು | ಪೊಲೀಸ್ ಠಾಣೆಯಲ್ಲಿ ನಡೆದದ್ದೇನು?

ಕರ್ನಾಟಕದಾದ್ಯಂತ ದೊರೆತ ಭಾರೀ ಬೆಂಬಲಕ್ಕೆ ಮನತುಂಬಿ ಪತ್ರ ಬರೆದ ನಾದ ಬ್ರಹ್ಮ ಹಂಸಲೇಖ

ದುನಿಯಾ ವಿಜಯ್ ಮದುವೆಗೆ ಬಾರದಿದ್ದರೆ, ತಾಳಿಕಟ್ಟಿಸಿಕೊಳ್ಳುವುದಿಲ್ಲ: ಹಠ ಹಿಡಿದ ಯುವತಿ!

ತಂದೆ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಮಗನ ಮೇಲೆಯೇ ಹತ್ತಿದ ಕಾರು!

ಇತ್ತೀಚಿನ ಸುದ್ದಿ