ಪುನೀತ್ ರಾಜ್ ಕುಮಾರ್ ಜೀವನಾಧರಿತ ಸಿನಿಮಾ: ನಾಯಕ ಯಾರು ಗೊತ್ತಾ? - Mahanayaka
11:16 PM Wednesday 11 - December 2024

ಪುನೀತ್ ರಾಜ್ ಕುಮಾರ್ ಜೀವನಾಧರಿತ ಸಿನಿಮಾ: ನಾಯಕ ಯಾರು ಗೊತ್ತಾ?

shivarajkumar yuva rajkumar
25/11/2021

ಸಿನಿಡೆಸ್ಕ್: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ಅಗಲಿ ಬಹಳಷ್ಟು ದಿನಗಳಾದರೂ ಅವರ ಅಗಲಿಕೆಯಿಂದ ಉಂಟಾದ ನೋವು ಇನ್ನೂ ಯಾರನ್ನೂ ಬಿಟ್ಟು ಹೋಗಿಲ್ಲ. ಪ್ರತೀ ದಿನ ಸಾವಿರಾರು ಜನರು, ಅಪ್ಪು ಸಮಾಧಿಯ ದರ್ಶನ ಮಾಡಿಕೊಂಡು, ಕಣ್ಣೀರಿಟ್ಟು ಹೋಗುತ್ತಿರುವ ದೃಶ್ಯಗಳು ಕಾಣಿಸುತ್ತಲೇ ಇದೆ.

ಈ ನಡುವೆ ಪುವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೀವನಾಧರಿತ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳಿಂದ ಒತ್ತಾಯ ಕೇಳಿ ಬಂದಿದೆ.  ನಿರ್ದೇಶಕ ಸಂತೋಷ್ ಆನಂದ ರಾಮ್ ಅವರಿಗೆ ಇಂತಹದ್ದೊಂದು ಬೇಡಿಕೆಯನ್ನು ಅಪ್ಪು ಅಭಿಮಾನಿಯೊಬ್ಬರು ಇಟ್ಟಿದ್ದು, ಇದಕ್ಕೆ ಉತ್ತರಿಸಿದ ಸಂತೋಷ್ ಅವರು, ಈ ಕಲ್ಪನೆಯನ್ನು ತೆರೆಯ ಮೇಲೆ ತರಲು ನನ್ನಿಂದಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.

ಸಂತೋಷ್ ರಾಮ್ ಅವರು ನೀಡಿರುವ ಈ ಉತ್ತರ ಅಭಿಮಾನಿಗಳಲ್ಲಿ ಸಂಚಲನ ಉಂಟು ಮಾಡಿದ್ದು, ಅಪ್ಪು ಜೀವನಾಧರಿತ ಚಿತ್ರ ಯಾವಾಗ ಆರಂಭವಾಗುತ್ತದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾತ್ರವನ್ನು ಯಾರು ಮಾಡಬೇಕು ಎಂಬೆಲ್ಲ ಚರ್ಚೆಗಳು ಆರಂಭವಾಗಿದೆ.

ಪುನೀತ್ ರಾಜ್ ಕುಮಾರ್ ಅವರ ಪಾತ್ರವನ್ನು ಮಾಡಲು ಇಬ್ಬರು ಮಾತ್ರವೇ ಸಮರ್ಥರಿದ್ದು, ಪುನೀತ್ ರಾಜ್ ಕುಮಾರ್ ಅವರ ಅಣ್ಣ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಪುನೀತ್ ಅವರ ಜೀವನಾಧರಿತ ಚಿತ್ರದಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಜೀವನಾಧರಿತ ಚಿತ್ರ ಬರುತ್ತದೆ ಎಂಬ ನಿರೀಕ್ಷೆ ಇದೀಗ ಅಭಿಮಾನಿಗಳಲ್ಲಿ ದೊಡ್ಡದಾಗಿಯೇ ಬೆಳೆಯುತ್ತಿದೆ. ಅಭಿಮಾನಿಗಳ ನಿರೀಕ್ಷೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಅಪ್ಪು ಜೀವನ ಆದಷ್ಟು ಬೇಗ ತೆರೆಯ ಮೇಲೆ ಬರಲಿ ಎನ್ನುವ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿ ದೊಡ್ಡತನ ಮೆರೆದ ಆಮೀರ್ ಖಾನ್ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ: ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ಪ್ರಕರಣ ದಾಖಲು

ರಸ್ತೆಗಳು ಕತ್ರೀನಾ ಕೈಫ್ ಳ ಕೆನ್ನೆಯಂತೆ ನುಣುಪಾಗಿರಬೇಕು ಎಂದ ಸಚಿವ!

ಪೈಪ್ ಕತ್ತರಿಸಿದಾಗ ನೀರಿನ ಬದಲು ಬಂದದ್ದು ಕಂತೆ ಕಂತೆ ಹಣ! | ಎಸಿಬಿ ಅಧಿಕಾರಿಗಳಿಗೇ ಶಾಕ್!

ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮನೆಗೆ ಎಸಿಬಿ ದಾಳಿ: ಕೋಟ್ಯಾಂತರ ಮೌಲ್ಯದ ನಗ—ನಗದು ಪತ್ತೆ

ವಿದ್ಯುತ್ ಸ್ಪರ್ಶಿಸಿ ಯುವತಿಯ ದಾರುಣ ಸಾವು

ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ