ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ! - Mahanayaka
10:32 AM Thursday 12 - December 2024

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

harish poonja
27/11/2021

ಮಂಗಳೂರು: ಅಸ್ಪೃಶ್ಯತೆಯ ಆಚರಣೆ ಜನಸಾಮಾನ್ಯರನ್ನು ಮಾತ್ರವಲ್ಲ, ರಾಷ್ಟ್ರಪತಿಗಳನ್ನು ಕೂಡ ಕಾಡಿದ ಇತಿಹಾಸ ನಮ್ಮ ದೇಶದಲ್ಲಿದೆ. ಈ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಇಂತಹದ್ದೊಂದು ಹೀನಾಯ ಅವಮಾನವಾಗಿರುವ ಘಟನೆ ಸದ್ಯ ಕರಾವಳಿಯ ಮನೆಮನೆಗಳಲ್ಲಿಯೂ ಚರ್ಚೆಯನ್ನು ಹುಟ್ಟು ಹಾಕಿದೆ.

ಜೆಎಸ್ ಬಿ ಸಮುದಾಯದ ದೇವರ ಪಲ್ಲಕ್ಕಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಹೊತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಮೂಲಕ ಜಾತಿ, ಜಾತಿಗಳ ಒಳಗೆ ಆಚರಿಸುತ್ತಿರುವ ಮೈಲಿಗೆ ಅಥವಾ ಅಸ್ಪೃಶ್ಯತೆಯ ಆಚರಣೆಯ ಇನ್ನೊಂದು ಮುಖ ಬಹಿರಂಗಗೊಂಡಿದೆ. ‘ಅನ್ಯ ಧರ್ಮ’, ‘ಅನ್ಯ ಕೋಮು’ ಎಂಬ ಪದ ಬಳಕೆ ಕ್ರಮೇಣವಾಗಿ ‘ಅನ್ಯ ಜಾತಿ’ ಎಂದು ಮಾರ್ಪಾಡಾಗುತ್ತಿದ್ದು, ಜಾತಿ ಅನಿಷ್ಠ ಆಚರಣೆಯಿಂದ ಒಂದೇ ಧರ್ಮದೊಳಗೆ ಅನ್ಯ ಭಾವ ಸೃಷ್ಟಿಸಲಾಗುತ್ತಿದೆ ಇದೇ ರೀತಿಯಾಗಿ ಮುಂದುವರಿದರೆ, ಹಿಂದುಳಿದ ಸಮುದಾಯಗಳಿಗೆ ಗೆರಟೆಯಲ್ಲಿ ಚಹಾ ನೀಡುವಂತ ಹಿಂದಿನ ಕಾಲದ ಅಸ್ಪೃಶ್ಯತೆಯ ಆಚರಣೆಗಳು ಮತ್ತೆ ಮರುಕಳಿಸುವುದನ್ನು ಅಲ್ಲಗಳೆಯುವಂತಿಲ್ಲ ಎನ್ನುವ ಚರ್ಚೆಯನ್ನು ಇದು ಹುಟ್ಟು ಹಾಕಿದೆ.

ಆಗಿದ್ದೇನು?

ವರದಿಗಳ ಪ್ರಕಾರ, ಕಾರ್ತಿಕ ಹುಣ್ಣಿಮೆಯ ದಿನದಂದು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಲಾಯಿಲಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  ಕಾರ್ತಿಕಾ ದೀಪೋತ್ಸವ ಪ್ರಯುಕ್ತ ಉತ್ಸವ ಜರುಗಿತ್ತು. ಪಲ್ಲಕ್ಕಿ ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಶಾಸಕ ಹರೀಶ್ ಪೂಂಜಾ ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಜಾತಿಯ ಭಾವ ಇಲ್ಲದ ಕೆಲವು ಮುಗ್ಧ ಯುವಕರು ತಾವು ಹೊತ್ತಿದ್ದ ಪಲ್ಲಕ್ಕಿಯನ್ನು ಶಾಸಕರ ಹೆಗಲಿಗೆ ಇರಿಸಿ ಪ್ರೀತಿ ತೋರಿದ್ದಾರೆ. ಈ ವಿಡಿಯೋವನ್ನು ಹರೀಶ್ ಪೂಂಜಾ ಫೇಸ್ ಬಕ್ ಖಾತೆಯಲ್ಲಿ ಹಂಚಿಕೊಂಡ ಬಳಿಕ, ಇದು ದೊಡ್ಡ ಅಪರಾಧವಾಯಿತು ಎಂದು ವಿವಾದ ಸೃಷ್ಟಿಸಲಾಗಿದ್ದು, ಸಂಪ್ರದಾಯದ ಹೆಸರಿನಲ್ಲಿ ಜಾತಿಯನ್ನು ತಂದು ವಿವಾದ ಸೃಷ್ಟಿ ಮಾಡಲಾಗುತ್ತಿದೆ ಎನ್ನುವ ಚರ್ಚೆಗಳು ಇದೀಗ ಕೇಳಿ ಬಂದಿದೆ.

ಇನ್ನೂ ಪಲ್ಲಕ್ಕಿಗೆ ಎಲ್ಲರೂ ಹೆಗಲು ಕೊಡುವ ಸಂಪ್ರದಾಯವಿಲ್ಲ, ಪಲ್ಲಕ್ಕಿ ಹೊರುವವರು ಅದಕ್ಕೆಂದೇ ನಿಗದಿತ ಕಟ್ಟುಪಾಡುಗಳನ್ನು ಪಾಲಿಸಬೇಕು. ಪಲ್ಲಕ್ಕಿ ಹೊರುವವರು ಜಿಎಸ್ ಬಿ ಸಮುದಾಯದವರೇ ಆಗಬೇಕು ಎಂಬ ನಿಯಮ ಇದೆ. ಶಾಸಕರು ಎಲ್ಲೆಲ್ಲೋ ಸುತ್ತಾಡಿ ಬಂದು ಉತ್ಸವದ ಪಲ್ಲಕ್ಕಿಯಲ್ಲಿ ಹೊತ್ತು ಅಪವಿತ್ರ ಮಾಡಿದ್ದಾರೆ ಎಂದು ಇದೀಗ ವಿವಾದ ಸೃಷ್ಟಿಸಲಾಗಿದೆ.

ಇದೀಗ ಶಾಸಕರಿಗೆ ಪಲ್ಲಕ್ಕಿ ಹೊರಲು ಅವಕಾಶ ಮಾಡಿಕೊಟ್ಟ ಯುವಕರಿಂದ ದೇವರಿಗೆ ತಪ್ಪು ಕಾಣಿಕೆ ಹಾಕಿಸಲಾಗಿದೆ. ಜೊತೆಗೆ ಶಾಸಕರು ಮುಟ್ಟಿ ಮೈಲಿಗೆಯಾಗಿರುವ ದೇವರ ಪಲ್ಲಕ್ಕಿಯನ್ನು ಶುದ್ಧೀಕರಣ ಮಾಡಲಾಗಿದೆ. ಇದೀಗ ಕರಾವಳಿಯಲ್ಲಿ ಪರ ವಿರೋಧಗಳ ಚರ್ಚೆಗೆ ಕಾರಣವಾಗಿದೆ. ಕೆಲವರು ದೇವಸ್ಥಾನದವರು ಮಾಡಿದ್ದು ಸರಿ ಎಂದು ವಾದಿಸುತ್ತಿದ್ದಾರೆ. ಇನ್ನು ಕೆಲವರು ಇದೊಂದು ಪರೋಕ್ಷ ಅಸ್ಪೃಶ್ಯತಾ ಆರಚರಣೆ ಎಂಬಂತೆ ಚರ್ಚೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾಲಕನ ಮೇಲೆ ದಾಳಿ ನಡೆಸಿದ 7 ಬೀದಿ ನಾಯಿಗಳು

ಬುಡಕಟ್ಟು ಸಮುದಾಯದ 3 ಶಿಶುಗಳ ನಿಗೂಢ ಸಾವು!

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಪೇಜಾವರ ಶ್ರೀ ನಿರಾಕರಿಸಿದ್ದರು | ಜ್ಞಾನಪ್ರಕಾಶ ಸ್ವಾಮೀಜಿ

ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್, ಇನ್ನೊಂದು ಸ್ಲೇಟ್ ನಲ್ಲಿ ‘ಬಡವ ರಾಸ್ಕಲ್’ ಡೇಟ್!

ಸರ್ಕಾರಿ ಲೈಬ್ರೆರಿಗಳಲ್ಲಿ ಅಂಬೇಡ್ಕರ್ ಪುಸ್ತಕಗಳ ಬಗ್ಗೆ ಯಾಕೆ ಈ ಅಸಡ್ಡೆ?

‘ಜೈಭೀಮ್’ ಸಿನಿಮಾ ಹೋಲುವ ಪ್ರಕರಣ | ತನ್ನ 3 ಮಕ್ಕಳ ಕೊಲೆಗೆ 19 ವರ್ಷಗಳ ಬಳಿಕ ನ್ಯಾಯ ಪಡೆದ ತಂದೆ!

ಬೆಂಗಳೂರಿನಲ್ಲಿ ಎರಡು ಬಾರಿ ಭೂಕಂಪನದ ಅನುಭವ: ಮಂಡ್ಯದಲ್ಲಿ ಕೇಳಿ ಬಂತು ನಿಗೂಢ ಶಬ್ಧ!

ಇತ್ತೀಚಿನ ಸುದ್ದಿ