ಒಂದೇ ದಿನದಲ್ಲಿ ಫೇಮಸ್ ಆದ ‘ಗುಟ್ಕಾ ಮ್ಯಾನ್’ ಗೆ ಶುರುವಾಯ್ತು ತಲೆನೋವು! | ಪಕ್ಕದಲ್ಲಿದ್ದ ಹುಡುಗಿ ಯಾರು ಗೊತ್ತಾ? - Mahanayaka
8:23 AM Thursday 12 - December 2024

ಒಂದೇ ದಿನದಲ್ಲಿ ಫೇಮಸ್ ಆದ ‘ಗುಟ್ಕಾ ಮ್ಯಾನ್’ ಗೆ ಶುರುವಾಯ್ತು ತಲೆನೋವು! | ಪಕ್ಕದಲ್ಲಿದ್ದ ಹುಡುಗಿ ಯಾರು ಗೊತ್ತಾ?

gutka man
27/11/2021

ಕಾನ್ಪುರ: ಭಾರತ ನ್ಯೂಝಿಲೆಂಡ್ ಮೊದಲ ಟೆಸ್ಟ್ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಬಾಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೋ ಹಾಗೂ ಫೋಟೋ ಭಾರೀ ವೈರಲ್ ಆಗಿತ್ತು. ಇದಕ್ಕೆ ನಾನಾ ರೀತಿಯ ಮೀಮ್ಸ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೀಮ್ಸ್ ಗಳು ಹರಿದಾಡುತ್ತಿರುವ ಹಿನ್ನೆಲೆಯ ಈ ವ್ಯಕ್ತಿ ಇದೀಗ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರೀನ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದ ವೇಳೆ ಕಾನ್ಪುರದ ಮಹೇಶ್ವರಿ ಮಹೋಲ್ ನಿವಾಸಿ ಶೋಬಿತ್ ಪಾಂಡೆ ಎಂಬವರು ಯುವತಿಯೋರ್ವಳ ಪಕ್ಕದಲ್ಲಿ ಕುಳಿತುಕೊಂಡು ಗುಟ್ಕಾ ಜಗಿಯುತ್ತಾ, ಫೋನ್ ನಲ್ಲಿ ಮಾತನಾಡುತ್ತಿರುವ ದೃಶ್ಯ ತೆರೆಯ ಮೇಲೆ ಕಂಡು ಬಂದಿತ್ತು. ಆ ಬಳಿಕ ಇದು ವ್ಯಾಪಕವಾಗಿ ವೈರಲ್ ಆಗಿತ್ತು. ಪಕ್ಕದಲ್ಲಿರುವ ಯುವತಿ ಆತನ ಗರ್ಲ್ ಫ್ರೆಂಡ್ ಎಂದು ಅಂದುಕೊಂಡು ಕೆಲವರು ಬಾಯಿಗೆ ಬಂದಂತೆ ಮೀಮ್ಸ್ ಕೂಡ ಹರಿಯಬಿಟ್ಟಿದ್ದರು.

ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶೋಬಿತ್ ಪಾಂಡೆ, ನಾನು ನನ್ನ ತಂಗಿಯ ಜೊತೆಗೆ ಕ್ರಿಕೆಟ್ ಮ್ಯಾನ್ ನೋಡುತ್ತಿದ್ದೆ. ಈ ವೇಳೆ ನಾನು ಎಲೆ ಅಡಿಕೆ ತಿನ್ನುತ್ತಿದೆ. ನನ್ನ ಸ್ನೇಹಿತ ಕೂಡ ಇದೇ ಸ್ಟೇಡಿಯಂನಲ್ಲಿದ್ದ ಹಾಗಾಗಿ ಆತನ ಬಳಿಯಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದೆ ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆದ ಬಳಿಕ ಶೋಬಿತ್ ನ್ನು ‘ಗುಟ್ಕಾ ಮ್ಯಾನ್’ ಎಂದು ಟ್ರೋಲ್ ಮಾಡಲಾಗಿತ್ತು. ಆದರೆ, ವಿಡಿಯೋದಲ್ಲಿ ಅವರ ತಂಗಿ ಪಕ್ಕದಲ್ಲಿದ್ದಾಳೆ. ಆದರೆ, ಕೆಲವರು ಆಕೆ ತಂಗಿ ಎನ್ನುವುದು ತಿಳಿಯದೇ ಅಶ್ಲೀಲ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಶೋಬಿತ್ ತೀವ್ರವಾಗಿ ನೊಂದುಕೊಂಡಿರುವುದಾಗಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

ಬಾಲಕನ ಮೇಲೆ ದಾಳಿ ನಡೆಸಿದ 7 ಬೀದಿ ನಾಯಿಗಳು

ಬುಡಕಟ್ಟು ಸಮುದಾಯದ 3 ಶಿಶುಗಳ ನಿಗೂಢ ಸಾವು!

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಪೇಜಾವರ ಶ್ರೀ ನಿರಾಕರಿಸಿದ್ದರು | ಜ್ಞಾನಪ್ರಕಾಶ ಸ್ವಾಮೀಜಿ

ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್, ಇನ್ನೊಂದು ಸ್ಲೇಟ್ ನಲ್ಲಿ ‘ಬಡವ ರಾಸ್ಕಲ್’ ಡೇಟ್!

ಸರ್ಕಾರಿ ಲೈಬ್ರೆರಿಗಳಲ್ಲಿ ಅಂಬೇಡ್ಕರ್ ಪುಸ್ತಕಗಳ ಬಗ್ಗೆ ಯಾಕೆ ಈ ಅಸಡ್ಡೆ?

ಇತ್ತೀಚಿನ ಸುದ್ದಿ