ಡಿಜೆ ಸೌಂಡ್ ಗೆ ಹೃದಯಾಘಾತಗೊಂಡು 63 ಕೋಳಿಗಳ ಸಾವು - Mahanayaka
10:14 AM Thursday 12 - December 2024

ಡಿಜೆ ಸೌಂಡ್ ಗೆ ಹೃದಯಾಘಾತಗೊಂಡು 63 ಕೋಳಿಗಳ ಸಾವು

dj
27/11/2021

ಬಾಲಸೋರ್: ಪ್ರಸ್ತುತ ಎಲ್ಲಿಯೇ ಮದುವೆಯಾಗಲಿ ಅಲ್ಲಿ ಡಿಜೆ ಸೌಂಡ್ ಇದ್ದೇ ಇರುತ್ತದೆ. ಡಿಜೆ ಇಲ್ಲದ ಮದುವೆ ಕಾರ್ಯಕ್ರಮದಲ್ಲಿ ಯುವಕರ ಸಂಖ್ಯೆ ಅಂತು ಇರೋದೇ ಇಲ್ಲ. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮದುವೆ ಮನೆಯಲ್ಲಿ ಜೋರಾಗಿ ಡಿಜೆ ಹಾಕಿದ ಪರಿಣಾಮ ಕೋಳಿ ಫಾರಂನ 63 ಕೋಳಿಗಳು ಹೃದಯಾಘಾತಗೊಂಡು ಸತ್ತು ಹೋಗಿರುವ ಘಟನೆ ನಡೆದಿದೆ.

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮದುಮಗನ ಮೆರವಣಿಗೆಯ ವೇಳೆ(ರಾತ್ರಿ 11 ಗಂಟೆಗೆ) ಜೋರಾದ ಶಬ್ಧಗಳ ಡಿಜೆ ಹಾಗೂ ಭಾರೀ ಸದ್ದಿನ ಪಟಾಕಿಗಳನ್ನು ಸಿಡಿಸಲಾಗಿದ್ದು, ಇದರ ಪರಿಣಾಮ ಅಲ್ಲೇ ಸಮೀಪದಲ್ಲಿದ್ದ  ರಂಜಿತ್ ಪರಿದಾ ಎಂಬವರ ಕೋಳಿ ಫಾರಂನಲ್ಲಿದ್ದ ಕೋಳಿಗಳು ಬೆದರಿ ಹೋಗಿದ್ದು, ಸುಮಾರು 63 ಕೋಳಿಗಳು ಹೃದಯಾಘಾತಗೊಂಡು ಸತ್ತು ಹೋಗಿದೆ ಎಂದು ಅವರು ಆರೋಪಿಸಿದ್ದಾರೆ.

ಜೋರಾಗಿ ಶಬ್ಧ ಇಡಬೇಡಿ ಎಂದು  ಮನವಿ ಮಾಡಿಕೊಂಡರೂ ಅವರು ಕೇಳಲಿಲ್ಲ. ಕುಡಿದ ಚಿತ್ತಾಗಿದ್ದ ಅವರು ನನ್ನ ಮೇಲೆಯೇ ಹಲ್ಲೆಗೆ ಮುಂದಾದರು ಎಂದು ರಂಜಿತ್ ಪರಿದಾ ಅವರು ಹೇಳಿದ್ದು, ಈ ಬಗ್ಗೆ ಸವಿವರವಾದ ದೂರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಸ್ತೆಯ ಗುಂಡಿಗೆ ರೈತನ ಪ್ರಾಣ ಬಲಿ | ಆಕ್ರೋಶಿತ ಸ್ಥಳೀಯರಿಂದ ಪ್ರತಿಭಟನೆ

ಬೆಲೆ ಹೆಚ್ಚಿಸಿ ಶಾಕ್ ನೀಡಿದ್ದ ಏರ್ಟೆಲ್ ಈಗ ನೀಡಿರುವ ಆಫರ್ ಏನು ಗೊತ್ತಾ?

ಒಂದೇ ದಿನದಲ್ಲಿ ಫೇಮಸ್ ಆದ ‘ಗುಟ್ಕಾ ಮ್ಯಾನ್’ ಗೆ ಶುರುವಾಯ್ತು ತಲೆನೋವು! | ಪಕ್ಕದಲ್ಲಿದ್ದ ಹುಡುಗಿ ಯಾರು ಗೊತ್ತಾ?

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

‘ಜೈಭೀಮ್’ ಸಿನಿಮಾ ಹೋಲುವ ಪ್ರಕರಣ | ತನ್ನ 3 ಮಕ್ಕಳ ಕೊಲೆಗೆ 19 ವರ್ಷಗಳ ಬಳಿಕ ನ್ಯಾಯ ಪಡೆದ ತಂದೆ!

ಬಡ ಜನತೆಗೆ ಸಿಹಿ ಸುದ್ದಿ ನೀಡಿದ ಪ್ರಧಾನಿ: ಉಚಿತ ಅಕ್ಕಿ ಯೋಜನೆ ಮುಂದುವರಿಕೆ

ಇತ್ತೀಚಿನ ಸುದ್ದಿ